ಮಳೆ-ಗಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಸೋಮವಾರಪೇಟೆ ತಾಲೂಕು ಕರವೇ ಪದಾಧಿಕಾರಿಗಳು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು. ಫ್ರಾನ್ಸಿಸ್, ರಾಮಚಂದ್ರ, ಶಿವಕುಮಾರ್ ಇದ್ದರು. 
ಜಿಲ್ಲೆ

ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್‌ಗಳ ವಿತರಣೆ

ಸೋಮವಾರಪೇಟೆ: ಗಾಳಿ-ಮಳೆಯಿಂದ ವಾಸದ ಮನೆಗೆ ಹಾನಿಯಾಗಿದ್ದ ಬಡ ಕುಟುಂಬಗಳಿಗೆ ದಾನಿಗಳು ನೀಡಿದ ಆಹಾರ ಸಾಮಗ್ರಿಗಳ ಕಿಟ್‌ಅನ್ನು ಕರ್ನಾಟಕ ರಕ್ಷಣ ವೇದಿಕೆ ಪದಾಧಿಕಾರಿಗಳು ಮಂಗಳವಾರ ವಿತರಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚನ್ನಾಪುರ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆ-ಗಾಳಿಗೆ ಮನೆಗಳಿಗೆ ಹಾನಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು, ಕೊಪರ್ ಎಸ್ಟೇಟ್ ಮಾಲೀಕರಾದ ಕೆ.ವಿ.ನಿಶಾಂತ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ನೀಡಿದ ಆಹಾರ ಸಾಮಗ್ರಿಗಳನ್ನು ಸಂತ್ರಸ್ತ ಎಂಟು ಕುಟುಂಬಗಳಿಗೆ ವಿತರಿಸಿದ್ದಾರೆ.
ಪ್ರಮುಖರಾದ ಶಿವಪ್ರಸಾದ್, ಟಿ.ಆರ್.ರಾಮಚಂದ್ರ, ವಿಶ್ವನಾಥ್, ವಿಶ್ವರೂಪ ಆಚಾರ್ಯ, ಡೀವನ್ ಡಿಸೋಜ ಇದ್ದರು.