ಲೋಕಾಪುರ :ಸುದ್ದಿ ಓದುಗರ ಕೈ ಸೇರಬೇಕಾದರೆ ಪತ್ರಿಕೆ ವಿತರಣೆ ಮಾಡುವ ಕೈಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಬಣ್ಣಾ ಪೂಜಾರಿ ಹೇಳಿದರು.
ಪಟ್ಟಣದ ರಾಮಕೃಷ್ಣ ಪರಮಹಂಸ ಶಿಣ ಸಂಸ್ಥೆಯ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ರಿಕಾ ವಿತರಕರ ದಿನ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸೂರ್ಯನ ರಶ್ಮಿ ಭುವಿಗೆ ಬೀಳುವ ಮುನ್ನ ಪತ್ರಿಕಾ ವಿತರಕರ ಕಾಯಕ ಶುರುವಾಗಿ, ಕೊರೆಯುವ ಚಳಿಯಿರಲಿ, ಸುರಿಯುವ ಮಳೆ ಇರಲಿ ಪತ್ರಿಕೆ ಹಿಡಿದು ಮನೆ ಮನೆಗೆ ಸುದ್ಧಿ ಜತೆಗೆ ಜ್ಞಾನ ದೀವಿಗೆ ಹಂಚುತ್ತಾರೆ. ಮುಂಜಾನೆಯ ಚಳಿಯಲ್ಲೂ ಬೆವರು ಹರಿಸಿ ಸುದ್ದಿಮನೆ ಓದುಗರಿಗೆ ಸಂಪರ್ಕ ಸೇತುವೆಯಾಗಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಸಲಿಂ ಕೊಪ್ಪದ ಮಾತನಾಡಿ, ಪತ್ರಿಕಾ ೇತ್ರದಲ್ಲಿ ವಿತರಕರ ಕಾರ್ಯ ಅತ್ಯಂತ ಗೌರವಯುತ್ತವಾದುದು ಹಾಗೂ ಶ್ರೇಷ್ಠವಾದುದು ಪತ್ರಿಕಾ ವಿತರಕರ ದಿನಾಚರಣೆಯೆಂದು ಪತ್ರಿಕೆ ವಿತರಿಸುವ ಮನಸ್ಸುಗಳನ್ನು, ಪತ್ರಿಕೆ ರವಾನಿಸುವ ಚಾಲಕರನ್ನು ಪ್ರತಿಯೊಬ್ಬರು ಗೌರವಿಸಬೇಕು, ಪಟ್ಟಣದಲ್ಲಿ ಪತ್ರಿಕಾ ವಿತರಣೆ ಮಾಡುತ್ತಾ ಪತ್ರಕರ್ತರು ಹಾಗೂ ಓದುಗರ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪತ್ರಕರ್ತ ಸಿದ್ದು ಹೂಗಾರ ಮಾತನಾಡಿ, ನಮ್ಮ ಕೆಲಸಕ್ಕೆ ಓಗಟ್ಟು ಪತ್ರಿಕಾ ವಿತರಕರಿಗೆ ದಿನಸಿ ಕಿಟ್ಟ ಹಾಗೂ ನೋಟ್ ಬುಕ್ಗಳಿಗೆ ಸಹಾಯ ಮಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಕೃತತೆ ಸಲ್ಲಿಸಿದರು.
ಈ ವೇಳೆ ಪತ್ರಕರ್ತರಾದ ಶ್ರೀನಿವಾಸ ಬಬಲಾದಿ, ಹಸನಡೋಂಗ್ರಿ ಮಹಾಲಿಂಗಪುರ, ಈರಪ್ಪ ಸಾಳಗುಂದಿ, ಪೀರಸಾಬ ನಧಾಪ ಇದ್ದರು.
ಲೋಕಾಪುರ ಪಟ್ಟಣದ ರಾಮಕೃಷ್ಣ ಪರಮಹಂಸ ಶಿಣ ಸಂಸ್ಥೆಯ ಸಿರಿಗನ್ನಡ ಶಾಲೆಯಲ್ಲಿ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ದಿನಸಿ ಕಿಟ್ಗಳನ್ನು ನೀಡಲಾಯಿತು. ಈ ವೇಳ ಪಪಂ ಮುಖ್ಯಾಧಿಕಾರಿ ಸಾಬಣ್ಣಾ ಪೂಜಾರಿ, ಪತ್ರಕರ್ತರಾದ ಸಿದ್ದು ಹೂಗಾರ, ಸಲಿಂ ಕೊಪ್ಪದ, ಪೀರಸಾಬ ನಧಾಪ, ಶ್ರೀನಿವಾಸ ಬಬಲಾದಿ, ಈರಣ್ಣಾ ಸಾಳಗುಂದಿ, ಹಸನಡೋಂಗ್ರಿ ಮಹಾಲಿಂಗಪುರ ಇದ್ದರು.