ಜಿಲ್ಲೆ

ಬಸ್ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

Kodagu

ಮಡಿಕೇರಿ: ಜೆಡಿಎಸ್ ಕೊಡಗು ಜಿಲ್ಲಾ ಘಟಕ ವತಿಯಿಂದ 150 ಖಾಸಗಿ ಬಸ್ ಕಾರ್ಮಿಕರಿಗೆ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಬುಧವಾರ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಕಿಟ್ ವಿತರಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್, ಕರೊನಾ ವೈರಸ್‌ನಿಂದಾಗಿ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಬಸ್ ಚಾಲಕರು, ಕಂಡಕ್ಟರ್, ಕ್ಲೀನರ್, ಏಜೆಂಟ್‌ಗಳಿಗೆ ಜೆಡಿಎಸ್ ವತಿಯಿಂದ ನೆರವು ನೀಡಲಾಗುತ್ತಿದ್ದು, ಅವರ ಸಂಕಷ್ಟಕ್ಕೆ ಸದಾ ಜೆಡಿಎಸ್ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಬಸ್ ಚಾಲಕರ ಸಂಘದ ಅಧ್ಯಕ್ಷ ಭರತ್ ಮಾತನಾಡಿ, ಜೆಡಿಎಸ್ ಬಸ್ ಕಾರ್ಮಿಕರ ಪರ ನಿಂತಿರುವುದು ಸಂತೋಷದ ವಿಚಾರ. ಬಸ್ ಸಂಚಾರವಿಲ್ಲದೆ ಕುಟುಂಬಗಳು ಅತಂತ್ರವಾಗಿದ್ದು, ದಾನಿಗಳ ನೆರವಿನಿಂದ ಸಹಾಯವಾಗುತ್ತಿದೆ ಎಂದರು.

ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ರಾಜ್ಯ ಉಪಾಧ್ಯಕ್ಷ ಎಂ.ಎಂ.ಶರೀಫ್, ಮಡಿಕೇರಿ ತಾಲೂಕು ಅಧ್ಯಕ್ಷ ಗೌತಮ್, ಯುವ ಘಟಕದ ಕಾರ್ಯಕದರ್ಶಿ ಜಾಸಿರ್, ಉಪಾಧ್ಯಕ್ಷ ಯೂಸಫ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಅಲಿ, ಮಹಿಳಾ ಘಟಕ ಅಧ್ಯಕ್ಷ ಲೀಲಾ ಶೇಷಮ್ಮ ಇತರರಿದ್ದರು.