ಬೇಲೂರು ಪಟ್ಟಣಕ್ಕೆ ಆಗಮಿಸಿದ ಪಾದಯಾತ್ರಿಗಳಿಗೆ ಡಾ.ರಾಜ್‌ಕುಮಾರ್ ಸಂಘದಿಂದ ಬಿಸ್ಕೆಟ್, ಕಾಫಿ ವಿತರಿಸಲಾಯಿತು. 
ಜಿಲ್ಲೆ

ಪಾದಯಾತ್ರಿಗಳಿಗೆ ಉಪಾಹಾರ, ಔಷಧ ವಿತರಣೆ

ಬೇಲೂರು: ಮಹಾಶಿವರಾತ್ರಿ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿರುವವರಿಗೆ ಹಲವಾರು ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಾಹಾರ, ಔಷಧ ಹಾಗೂ ಕುಡಿವ ನೀರು ವಿತರಿಸಿದರು.

ವಿಶೇಷವೆಂದರೆ ಕಳೆದ ಕೆಲ ವರ್ಷಗಳಿಂದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಉಪಾಹಾರ ನೀಡಿದರೆ, ಔಷಧ ವ್ಯಾಪಾರಿಗಳ ಸಂಘದಿಂದ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸುತ್ತಿದೆ.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, 17 ವರ್ಷಗಳಿಂದ ಪಾದಯಾತ್ರಿಗಳಿಗೆ ಉಪಾಹಾರ ಹಾಗೂ ಔಷಧವನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೈಲಾದ ಸೇವೆ ಸಲ್ಲಿಸಿದ್ದು, ಇನ್ನಷ್ಟು ಸಮಾಜ ಸೇವೆ ಮಾಡಲು ಶಕ್ತಿ ಬಂದಿದೆ ಎಂದರು.

ಎಸ್‌ಬಿಎಂ ಮಂಜು, ರವಿಭಟ್ಟ, ಫಣೀಂದ್ರ, ಸಂಪತ್, ಕುಮಾರ್, ಪುರುಷೋತ್ತಮಚಾರ್, ಸಾಹುಲ್, ರಘು, ಶೈಲಾ, ಸೌಮ್ಯಾ, ದಯಾನಂದ್, ಜ್ಯೋತಿ, ಭಾರತಿ, ಮಣಿಶಂಕರ್ ಇತರರಿದ್ದರು.