ಚಾಮರಾಜನಗರ: ಬಸವ ಜಯಂತಿ ಅಂಗವಾಗಿ ಕೊಳ್ಳೇಗಾಲ ಪಟ್ಟಣದ ಶ್ರೀ ಬಸವೇಶ್ವರ ನಗರದಲ್ಲಿ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಫಾಯಿ ಕರ್ಮಚಾರಿಗಳಿಗೆ ಉಚಿತ ಸಲಕರಣೆ ವಿತರಿಸಲಾಯಿತು.
ಈ ವೇಳೆ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ಕಡೆಯಿಂದ 30 ಮಂದಿ ಕರ್ಮಚಾರಿಗಳಿಗೆ ಅಗತ್ಯವಿರುವ ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ನಮ್ಮ ಟ್ರಸ್ಟ್‌ನಿಂದ ಸಾವಿರಾರು ಮಂದಿ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ತರಬೇತಿ ನಡೆಸಲಾಗಿದೆ. ಕೆಲವರಿಗೆ ಉದ್ಯೋಗ ನೀಡಲಾಗುತ್ತಿದೆ. ಜತೆಗೆ ಜನಪರ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಜನ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಜಿಲ್ಲಾ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ಪರಶಿವಮೂರ್ತಿ, ಶ್ರೀಗಂಗಾ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ದಿವ್ಯಶ್ರೀ, ನಿರ್ದೇಶಕ ಎಸ್.ಎನ್. ಚಿಕ್ಕಲಿಂಗೇಗೌಡ, ಸಂಯೋಜಕ ರಾಜಣ್ಣ, ರಚನಾ, ಶಶಾಂಕ್, ನವ್ಯಾ, ಕಾವ್ಯಾ, ಲಕ್ಷ್ಮೀ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ್ ಹಾಗೂ ಮಧುಕುಮಾರ್ ಇದ್ದರು.