ಕಟ್ಟಿನಮನೆ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಎಂ.ವಿ.ರಾಜೇಂದ್ರ, ಶಂಕರನಾರಾಯಣಭಟ್, ಸುಭಾಷ್, ಭಾರತಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಕಲಿಕೋಪಕರಣ ವಿತರಣೆ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ಯೂತ್ ಾರ್ ಸೇವಾ ಸಂಸ್ಥೆ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕೋಪಕರಣ ನೀಡುತ್ತಿದೆ ಎಂದು ಯೂತ್ ಾರ್ ಸೇವಾ ಸಂಸ್ಥೆ ಸಂಯೋಜಕ ಎಂ.ವಿ.ರಾಜೇಂದ್ರ ಕುಮಾರ್ ತಿಳಿಸಿದರು. ಕಟ್ಟಿನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ, ಯೂತ್ ಫಾರ್ ಸೇವಾ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದ 14 ಸರ್ಕಾರಿ ಶಾಲೆಗಳ 576 ಮಕ್ಕಳಿಗೆ ಕಲಿಕೋಪಕರಣ ವಿತರಿಸಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಶಂಕರನಾರಾಯಣ ಭಟ್ ಮಾತನಾಡಿ, ಮಕ್ಕಳು ಈ ಸಂಸ್ಥೆ ನೀಡಿದ ಕಲಿಕೋಪಕರಣ ಬಳಸಿಕೊಂಡು ದೊಡ್ಡವರಾದ ಮೇಲೆ ನೀವು ಸಹ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸ್ವಯಂ ಸೇವಕ ಸುಭಾಷ್, ಮುಖ್ಯಶಿಕ್ಷಕಿ ಭಾರತಿ ಮ್ತತು ಸಹ ಶಿಕ್ಷಕರು ಇದ್ದರು.