ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ವಿವಿಧ ಕಡೆ ವೆಂಕಟೇಶ ಅಶೋಕ ಕಾಟವೆ (ವಿಎಕೆ) ಫೌಂಡೇಷನ್ ವತಿಯಿಂದ ಸಮಾಜದ ಬಡವರಿಗೆ ದವಸ-ಧಾನ್ಯವನ್ನು ಬುಧವಾರ ವಿತರಿಸಲಾಯಿತು. ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ಪ್ರಮುಖರಾದ ಪ್ರಕಾಶ ಬುರಬುರೆ, ವಿಠ್ಠಲ ಲದವಾ, ಇತರರು ಇದ್ದರು.