ಜಿಲ್ಲೆ

ಭೂಸ್ವಾಧೀನ ಫಲಾನುಭವಿಗಳಿಗೆ ಪರಿಹಾರಧನ ವಿತರಣೆ

ಸೌಮ್ಯ ಆರ್

ಮೂಡುಬಿದಿರೆ: ಸಾಣೂರು- ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನಡೆದಿರುವ ಭೂಸ್ವಾಧೀನ ಕುರಿತಂತೆ ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ 49 ಫಲಾನುಭವಿಗಳಿಗೆ 22,49,75,458 ರೂ. ಪರಿಹಾರ ಧನ ನೀಡುವ ಅದಾಲತ್ ನಡೆಯಿತು.

ವಿಶೇಷ ಭೂಸ್ವಾಧೀನ ಅಧಿಕಾರಿ ಮೊಹಮ್ಮದ್ ಇಸಾಕ್ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಿದರು. ಸಾಣೂರು (8 ಮಂದಿ- 1,67,10,192ರೂ.), ಬೆಳುವಾಯಿ (3 ಮಂದಿ-15,76,634ರೂ.), ಮಾರ್ಪಾಡಿ (3 ಮಂದಿ-45,58,611ರೂ.), ಪುತ್ತಿಗೆ (26 ಮಂದಿ-19,00,97,045ರೂ.), ತೆಂಕಮಿಜಾರು (4 ಮಂದಿ-ರೂ.43,31,099), ಬಡಗ ಮಿಜಾರು (2 ಮಂದಿ-13,89,905ರೂ.), ಬಡಗ ಎಡಪದವು (2 ಮಂದಿ- 9,59,154ರೂ.), ತೆಂಕ ಎಡಪದವು (ಒಬ್ಬರಿಗೆ- 1,04,863 ರೂ.) ಹೀಗೆ 8 ಗ್ರಾಮಗಳ 49 ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಲಾಯಿತು.

ಅದಾಲತ್‌ನಲ್ಲಿ ಪ್ರಥಮ ದರ್ಜೆ ಸಹಾಯಕರಾದ ಪುರಂದರ ಪೂಜಾರಿ, ಡಾ.ಎನ್. ಸೋಮಶೇಖರ ಮಯ್ಯ, ಶಾಂತಿರಾಜ್, ಕಂದಾಯ ನಿರೀಕ್ಷಕರಾದ ಗೋಪಾಲ ಶೇರಿಗಾರ್, ಗಂಗಾಧರ್, ಸರ್ವೇಯರ್ ಸಂಜೀವ ಎಚ್. ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.