ಸಂಡೂರು: ಕೃಷ್ಣಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸತ್ತು ಚುನಾವಣೆ ನಡೆಯಿತು. 16 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಹೆಚ್ಚು ಮತಗಳನ್ನು ಪಡೆದು ಸಾನಿಯಾ ಪ್ರಧಾನಿಯಾಗಿ ಆಯ್ಕೆಯಾದಳು. ತಸ್ಮಿಯಾ ಶಿಕ್ಷಣ ಮಂತ್ರಿ, ಟಿ.ವೀರೇಶ ಗೃಹಮಂತ್ರಿ, ಸುಮಿತ್ರಾ ಆರೋಗ್ಯ ಮತ್ತು ನೈರ್ಮಲ್ಯ ಖಾತೆ ಸಚಿವೆ, ಎಚ್.ತೇಜಾ ಕ್ರೀಡಾ ಸಚಿವೆ, ಆಕಾಶ ವಾರ್ತಾ ಇಲಾಖೆ ಸಚಿವ, ಸಂಧ್ಯಾ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ, ಮಲ್ಲಿಕಾರ್ಜುನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಅಂಜುಮ್ ಸಾಂಸ್ಕೃತಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಶಿಕ್ಷಕ ಗುರುರಾಜ ಪ್ರಮಾಣ ವಚನ ಬೋಧಿಸಿದರು.