ಮದ್ದೂರು: ತಾಲೂಕಿನ ಶ್ರೀ ಚನ್ನಕೇಶ್ವರ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಬುಧವಾರ ಮರಳಿಗ ಯುವ ಬ್ರಿಗೇಡ್ ಸಹಯೋಗದೊಂದಿಗೆ ಮುಸ್ಲಿಂ ಯುವಕರು ಮಜ್ಜಿಗೆ ವಿತರಿಸಿದರು.
ಗ್ರಾಪಂ ಸದಸ್ಯ ಪರ್ವಿಜ್ ಮಾತನಾಡಿ, ಶ್ರೀ ಚನ್ನಕೇಶ್ವರ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮರಳಿಗ ಯುವ ಬ್ರಿಗೇಡ್ ಸಹಾಯದಿಂದ ಮುಸ್ಲಿಂ ಯುವಕರ ತಂಡದಿಂದ ಮಜ್ಜಿಗೆ ವಿತರಣೆ ಮಾಡಲಾಯಿತು. ನಾವೆಲ್ಲರೂ ಒಂದು, ನಮ್ಮಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಸೋಮಶೇಖರ್, ಮುಖಂಡರಾದ ಭರತ್, ಚಂದ್ರ, ಪ್ರಜ್ವಲ್, ಚಂದ್ರೇಗೌಡ, ಅಭಿಷೇಕ್, ಅಪ್ಪುಗೌಡ, ವಿಕಾಸ್, ಪುನಿ, ಕೆ.ಎಂ.ಅಹಮ್ಮದ್, ಶುಹೆಬ್, ನಯಾಜ್, ಅಪ್ಸರ್, ಬಕಷ್, ಯಾಸಿನ್, ಜಾವೀದ್ ಇದ್ದರು.