ಪೆರಾಜೆಯ ಕುಂಬಳಕೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಬೆಂಚ್ ಡೆಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು. ವಿನಯ ಕುಮಾರ್, ರಾಜು, ಪ್ರವೀಣ್ ಮಜಿಕೋಡಿ ಸೇರಿದಂತೆ ಇನ್ನಿತರರು ಇದ್ದರು. 
ಜಿಲ್ಲೆ

ಪೆರಾಜೆಯ ಕುಂಬಳಕೇರಿ ಶಾಲೆಗೆ ಬೆಂಚ್ ಡೆಸ್ಕ್ ವಿತರಣೆ

ನಾಪೋಕ್ಲು: ಪೆರಾಜೆಯ ಕುಂಬಳಕೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್‌ನ ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ ಬೆಂಚು, ಡೆಸ್ಕ್ ವಿತರಣೆ ಮಾಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ವಿನಯ ಕುಮಾರ್, ನಿಡ್ಡಿಲ್ ಶಾಲೆ ಮುಖ್ಯ ಶಿಕ್ಷಕ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಮಜಿಕೋಡಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಯರಾಮ, ಪೆರಾಜೆ ಒಕ್ಕೂಟದ ಅಧ್ಯಕ್ಷ ರೋಹಿತಾಶ್ವ ನಿಡ್ಯಮಲೆ, ಕಾರ್ಯದರ್ಶಿ ವನಿತಾ ನಿಡ್ಯಮಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕ ಸಂತೋಷ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.