ಮದ್ದೂರು ತಾಲೂಕಿನ ಚಾಮನಹಳ್ಳಿಯ ಗ್ರಾಮದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಯುವ ಚಿಂತನ ಬಳಗದಿಂದ ವಿದ್ಯಾರ್ಥಿಗಳಿಗೆ ಶಟಲ್ ಬ್ಯಾಡ್ಮಿಂಟನ್ ಬ್ಯಾಟ್, ಕ್ರಿಕೆಟ್ ಬ್ಯಾಟ್ ವಿತರಿಸಲಾಯಿತು. ರಾಚಯ್ಯ, ಜಗದೀಶ್, ಸೌಮ್ಯ, ಧರ್ಮಧೀರ, ಚಿಕ್ಕೋನು ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಬ್ಯಾಟ್, ಕ್ರಿಕೆಟ್ ಬ್ಯಾಟ್ ವಿತರಣೆ

ಅಭಿನಯ್ ಎಚ್.ಎಂ

ಮದ್ದೂರು: ಸರ್ ಎಂ.ವಿಶ್ವೇಶ್ವರಯ್ಯ ಯುವ ಚಿಂತನ ಬಳಗದಿಂದ ತಾಲೂಕಿನ ಚಾಮನಹಳ್ಳಿಯ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಟಲ್ ಬ್ಯಾಡ್ಮಿಂಟನ್ ಬ್ಯಾಟ್, ಕ್ರಿಕೆಟ್ ಬ್ಯಾಟ್ ವಿತರಿಸಲಾಯಿತು.

ಬಳಗದ ಕಾರ್ಯದರ್ಶಿ ರಾಚಯ್ಯ ಮಾತನಾಡಿ, ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಸಾಮಾಜಿಕ ಕಳಕಳಿ ಅಗತ್ಯ. ಗ್ರಾಮ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸಿಗುವ ಶೇ. 25 ಮೀಸಲಾತಿ ಅನುದಾನವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಜಗದೀಶ್, ಮಾಜಿ ಅಧ್ಯಕ್ಷೆ ಸೌಮ್ಯ, ಮುಖಂಡರಾದ ಧರ್ಮಧೀರ, ಚಿಕ್ಕೋನು ಇದ್ದರು.