ಜಿಲ್ಲೆ

ಚಿತ್ರಗಿ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ

ಕುಮಟಾ: ಪಟ್ಟಣದ ಚಿತ್ರಗಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸ್ಟುಡೆಂಟ್ಸ್ ವೆಲ್​ಫೇರ್ ಟ್ರಸ್ಟಿನ ವತಿಯಿಂದ ಉಚಿತವಾಗಿ ಬ್ಯಾಗ್ ವಿತರಿಸಲಾಯಿತು.

ಟ್ರಸ್ಟಿನ ಅಧ್ಯಕ್ಷ ಉದಯ ಚಿತ್ರಿಗಿ ನೇತೃತ್ವದಲ್ಲಿ ಅದೇ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆಯಾದ ಸ್ಟುಡೆಂಟ್ಸ್ ವೆಲ್ ಫೇರ್ ಟ್ರಸ್ಟಿನಡಿ, ಊರಿನ ಸರ್ಕಾರಿ ಶಾಲೆಯ ಎಲ್ಲ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಮಳೆ ನೀರಿನಿಂದ ಪಠ್ಯಪುಸ್ತಕಗಳಿಗೆ ರಕ್ಷಣೆ ನೀಡುವ ಉತ್ತಮ ಬ್ಯಾಗ್​ಗಳನ್ನು ವಿತರಿಸಲಾಯಿತು.

ಟ್ರಸ್ಟಿನ ಸದಸ್ಯರಾದ ಶೇಷಗಿರಿ ಶಾನಭಾಗ, ಸಂತೋಷ ನಾಯ್ಕ, ಲಕ್ಷ್ಮೀಕಾಂತ ಪಟಗಾರ, ಮಂಜುನಾಥ ಪಟಗಾರ, ಮೋಹನ ಕೋಮಾರಪಂತ, ಸುರೇಶ ಭಟ್, ನಾಗರಾಜ ನಾಯ್ಕ, ದಾಕ್ಷಾಯಿಣಿ ಅರಿಗ, ಮುಖ್ಯ ಶಿಕ್ಷಕ ಪಾಂಡುರಂಗ ಹಾಗೂ ಸಹ ಶಿಕ್ಷಕರು ಇದ್ದರು.