ಜಿಲ್ಲೆ

ಮೈಸೂರು ಗ್ರಾ.ಪಂ.ಗಳಿಗೆ ಪ್ರಶಂಸನಾ ಪತ್ರ ವಿತರಣೆ

ಮೈಸೂರು: ನರೇಗಾ ದಿನಾಚರಣೆ ಹಿನ್ನೆಲೆಯಲ್ಲಿ 2023-24ನೇ ಸಾಲಿನಲ್ಲಿ ಅತ್ಯುತ್ತಮವಾಗಿ ನರೇಗಾ ಯೋಜನೆ ಅನುಷ್ಠಾನಗೊಳಿಸಿದ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ.ಗಾಯತ್ರಿ ಅವರು ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದರು. ಅತ್ಯುತ್ತಮ ತಾಲೂಕು ಪಂಚಾಯತಿ ಪ್ರಶಸ್ತಿಯನ್ನು ಎಚ್.ಡಿ ಕೋಟೆ, ತಿ.ನರಸೀಪುರ, ನಂಜನಗೂಡು ಪಡೆದುಕೊಂಡವು.

ಅತ್ಯುತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿಯನ್ನು ತಿ.ನರಸೀಪುರದ ಕೊಳತ್ತೂರು, ಸರಗೂರಿನ ಮನುಗನಹಳ್ಳಿ, ಕೆ.ಆರ್. ನಗರದ ಕೆಸ್ತೂರು ಗ್ರಾಮ ಪಂಚಾಯತಿಗಳು ಪಡೆದುಕೊಂಡವು.

ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯತಿಗಳಾಗಿ ಸಾಲಿಗ್ರಾಮದ ಹೊನ್ನೇನಹಳ್ಳಿ, ತಿ.ನರಸೀಪುರದ ಕೊಳತ್ತೂರು, ಸರಗೂರಿನ ಮನುಗನಹಳ್ಳಿ, ಕೆ.ಆರ್.ನಗರದ ಕೆಸ್ತೂರು, ಎಚ್.ಡಿ ಕೋಟೆ ಚಿಕ್ಕೋಡನಹಳ್ಳಿ, ನಂಜನಗೂಡಿನ ನಲ್ಲಿತಾಳಪುರ, ಪಿರಿಯಾಪಟ್ಟಣದ ಕಣಗಾಲ್, ಹುಣಸೂರಿನ ಮರದೂರು, ಮೈಸೂರಿನ ದೇವಲಾಪುರ ಪಂಚಾಯತಿಗಳು ತಮ್ಮದಾಗಿಸಿಕೊಂಡವು.

ಉತ್ತಮ ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖೆಗಳಲ್ಲಿ ತೋಟಗಾರಿಕೆ ಇಲಾಖೆ ಪ್ರಶಂಸನೀಯ ಪತ್ರ ನೀಡಲಾಯಿತು. ತಾಲೂಕು ಮಟ್ಟದ ಅನುಷ್ಠಾನ ಇಲಾಖೆಗಳಲ್ಲಿ ಎಚ್.ಡಿ ಕೋಟೆಯಿಂದ ಸಾಮಾಜಿಕ ಅರಣ್ಯ ಇಲಾಖೆ, ತಿ.ನರಸೀಪುರದ ಕೃಷಿ ಇಲಾಖೆ, ನಂಜನಗೂಡಿನ ತೋಟಗಾರಿಕೆ ಇಲಾಖೆ ಹಾಗೂ ತಿ.ನರಸೀಪುರದ ರೇಷ್ಮೆ ಇಲಾಖೆಗಳಿಗೆ ಪ್ರಶಂಸನೀಯ ಪತ್ರಗಳನ್ನು ವಿತರಿಸಲಾಯಿತು.

ತಿ.ನರಸೀಪುರ ತಾಲೂಕು ಪಂಚಾಯತಿಯ ತಾಂತ್ರಿಕ ಸಹಾಯಕಿ ಹರ್ಷಿತಾ ಅವರಿಗೆ ಉತ್ತಮ ತಾಂತ್ರಿಕ ಸಹಾಯಕ ಪ್ರಶಂಸನಾ ಪತ್ರ ನೀಡಲಾಯಿತು. ಅಲ್ಲದೆ ಉತ್ತಮ ತಾಂತ್ರಿಕ ಸಹಾಯಕ ಇಂಜಿನಿಯರ್ ಪತ್ರಗಳನ್ನು ಕ್ರಮವಾಗಿ ಸರಗೂರಿನ ಸುಗಂಧರಾಜ್, ಕೆ.ಆರ್. ನಗರದ ಭಾನುಮತಿ ಹಾಗೂ ಅನುಷಾ ಅವರಿಗೆ ನೀಡಲಾಯಿತು.

ಉತ್ತಮ ತಾಲೂಕು ಎಂಐಎಸ್ ಸಂಯೋಜಕ ಪ್ರಶಂಸನೀಯ ಪತ್ರವನ್ನು ಕೆ.ಆರ್. ನಗರದ ಅನೂಪ್ ಹಾಗೂ ಉತ್ತಮ ಐಇಸಿ ಸಂಯೋಜಕ ಪ್ರಶಂಸನೀಯ ಪತ್ರವನ್ನು ಹುಣಸೂರಿನ ಪುಷ್ಪಲತಾ ಅವರು ಪಡೆದುಕೊಂಡರು. ಉತ್ತಮ ಬಿಎಫ್ಟಿ ಪ್ರಶಂಸನಾ ಪತ್ರಗಳನ್ನು ಹುಣಸೂರಿನ ಮಹದೇವ, ತಿ.ನರಸೀಪುರದ ಜ್ಯೋತಿ ಹಾಗೂ ಹುಣಸೂರಿನ ಕುಮಾರ ಅವರಿಗೆ ನೀಡಲಾಯಿತು. ಉತ್ತಮ ಸಾಮಾಜಿಕ ಪರಿಶೋಧನಾ ಪ್ರಶಂಸನೀಯ ಪತ್ರವನ್ನು ಮೈಸೂರು ತಾಲೂಕು ಪಡೆದುಕೊಂಡಿತು.

ಜಿ.ಪಂ. ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ ಕೃಷ್ಣರಾಜು, ಉಪ ಕಾರ್ಯದರ್ಶಿ(ಆಡಳಿತ) ಸವಿತಾ, ಸಿಪಿಓ ಪ್ರಭುಸ್ವಾಮಿ, ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆ ಅಧಿಕಾರಿಗಳು ಇತರರು ಇದ್ದರು.