ವಿಜಯಪುರ : ಇಲ್ಲಿನ ರಾವೇಂದ್ರ ಕಾಲನಿಯಲ್ಲಿರುವ ಶ್ರೀರಾ ಮುದ್ದು ಪ್ರಾಣಿಗಳ ಚಿಕಿತ್ಸಾ ಹಾಗೂ ಸಲಹಾ ಕೇಂದ್ರದಲ್ಲಿ ಜು. 28 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ರೋಟರಿ ಸಂಸ್ಥೆ ವಿಜಯಪುರ ಉತ್ತರ ಹಾಗೂ ಶ್ರೀ ರಾ ಮುದ್ದು ನಾಯಿಗಳ ಚಿಕಿತ್ಸಾ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ವಾನಗಳ ಮಾಲೀಕರು ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ರೋ. ಸಂತೋಷ ಔರಸಂಗ, ರೋ. ಅವಿನಾಶ ಭಾಹೇತಿ ಮತ್ತು ಡಾ. ಪ್ರಾಣೇಶ ಜಹಗಿರದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.