ಮೂಡಿಗೆರೆ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಚ್.ಬಿ.ಶಿವಣ್ಣ, ಒ.ಜಿ.ರವಿ, ಜಿ.ಕೆ.ದಿವಾಕರ್, ಟಿ.ಎಂ.ಮಮತಾ, ಎಂ.ಬಿ.ಅಶ್ವತ್ಥ್, ಬಿ.ಪಿ.ವಿಮಲಾ, ಕಾರ್ತಿಕ್ ಇತರರಿದ್ದರು. 
ಜಿಲ್ಲೆ

ಶೇ.25 ಡಿವಿಡೆಂಡ್ ವಿತರಣೆ

ಎಸ್.ಎನ್.ರವೀಂದ್ರ

ಮೂಡಿಗೆರೆ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಥಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ 90.55 ಸಾಲ ವಸೂಲಾತಿ ಗುರಿ ಸಾಧಿಸಿದೆ. 68 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಬಿ.ಶಿವಣ್ಣ ತಿಳಿಸಿದರು.

ಶನಿವಾರ ಬ್ಯಾಂಕ್‌ನ 88ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 1935ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಇದುವರೆಗೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತ ಬಂದಿದೆ. 140 ಹಳ್ಳಿಗಳಲ್ಲಿ ವ್ಯವಹಾರ ಮುಂದುವರಿದಿದೆ ಎಂದು ತಿಳಿಸಿದರು.
ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ವಿವಿಧ ಯೋಜನೆಗಳಿಂದ 774.46 ಲಕ್ಷ ರೂ. ಸಾಲ ಪಡೆಯಲಾಗಿದೆ. ಮುಂದಿನ ವರ್ಷ ರೈತರಿಗೆ ವಿವಿಧ ಯೋಜನೆಗಳಲ್ಲಿ ಸುಮಾರು 7 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಕಾರ್ತಿಕ್ ವಾರ್ಷಿಕ ವರದಿ ಮಂಡಿಸಿದರು. ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬ್ಯಾಂಕ್ ಮಾಜಿ ಅಧ್ಯಕ್ಷ ಒ.ಎಸ್.ಗೋಪಾಲಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಬ್ಯಾಂಕ್ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಒ.ಜಿ.ರವಿ, ನಿರ್ದೇಶಕರಾದ ಜಿ.ಕೆ.ದಿವಾಕರ್, ಟಿ.ಎಂ.ಮಮತಾ, ಎಂ.ಬಿ.ಅಶ್ವತ್ಥ್, ಬಿ.ಪಿ.ವಿಮಲಾ, ಎಚ್.ಕೆ.ಭರತ್, ಬಿ.ಎಸ್.ವಿಕ್ರಂ, ಜಿ.ಎಸ್.ಗಣಪತಿ ಆಚಾರ್, ಕೆ.ಟಿ.ಸತೀಶ್, ಡಿ.ಪಿ.ಪ್ರಕಾಶ ಹೆಗ್ಡೆ ಇತರರಿದ್ದರು.