ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ 2ನೇ ವರ್ಷಾಚರಣೆ ಅಂಗವಾಗಿ ಅರ್ಹರಿಗೆ ಗಾಲಿಕುರ್ಚಿ ವಿತರಿಸಲಾಯಿತು 
ಜಿಲ್ಲೆ

ಬ್ಯಾಂಕಿಂಗ್ ವ್ಯವಹಾರದೊಂದಿಗೆ ಅರ್ಹರಿಗೆ ಸಹಕಾರ

ಇಂದಿರಾ ಎನ್ ಕೆ

ಪಡುಬಿದ್ರಿ: ಬ್ಯಾಂಕಿಂಗ್ ವ್ಯವಹಾರದೊಂದಿಗೆ ಅರ್ಹರಿಗೆ ಸಹಕಾರ ನೀಡುವುದು ಅನುಕರಣೀಯವಾದುದು. ಈ ಮೂಲಕ ಸೊಸೈಟಿ ಬಹುಬೇಗ ಜನಮಾನಸದಲ್ಲಿ ನೆಲೆಯೂರುತ್ತದೆ ಎಂದು ಕರ್ಣಾಟಕ ಬ್ಯಾಂಕ್ ಪಡುಬಿದ್ರಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹೇಳಿದರು.
ಪಡುಬಿದ್ರಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಎರಡನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಸೊಸೈಟಿ ಪಡುಬಿದ್ರಿ ಶಾಖೆಯಲ್ಲಿ ಅಶಕ್ತ ವಿಶೇಷ ಚೇತನರಿಗೆ ಗಾಲಿಕುರ್ಚಿ ವಿತರಿಸಿ ಮಾತನಾಡಿದರು.

ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್,ಮಹಿಳಾ ಉದ್ಯಮಿ ಗೀತಾ ಅರುಣ್ ಶುಭ ಹಾರೈಸಿದರು. ಸೊಸೈಟಿ ನಿರ್ದೇಶಕ ಉಮನಾಥ ಜೆ.ಶೆಟ್ಟಿಗಾರ್, ಶಾಖಾ ವ್ಯವಸ್ಥಾಪಕಿ ಪ್ರಜ್ಞಾಶ್ರೀ ಚಿರಾಗ್, ಅಂಜಲಿ ದೇವಾಡಿಗ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.