ಅಥಣಿಯಲ್ಲಿರುವ ಅನಿಕೇತನ ಶಾಲೆಯಲ್ಲಿ ಮಕ್ಕಳಿಗೆ ಹಾಲು ಉಣಿಸುವ ಕಾರ್ಯಕ್ರಮ ಜರುಗಿತು. ಪ್ರಭುಚನ್ನಬಸವ ಸ್ವಾಮೀಜಿ, ಮುರುಘೇಶ ಬಾನಿ, ಬಸವರಾಜ ಇಟ್ನಾಳ, ಈರಣ್ಣ ಅಡಗಲ್ಲ ಇತರರಿದ್ದರು. 
ಜಿಲ್ಲೆ

ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸಿ

ಪ್ರಶಾಂತ ಹೂಗಾರ

ಅಥಣಿ: ಹಾಲು ಹಾವಿನ ಆಹಾರವಲ್ಲ, ಕಾರಣ ಕಲ್ಲ ನಾಗರಿಗೆ ಹಾಲು ಎರೆಯುವ ಬದಲು ಅಷೌಷ್ಟಿಕದಿಂದ ಬಳಲುತ್ತಿರುವ ಬಡ ಮಕ್ಕಳಿಗೆ ನೀಡಬೇಕು ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಶಂಕರನಗರದಲ್ಲಿರುವ ಅನಿಕೇತನ ಶಾಲಾ ಆವರಣದಲ್ಲಿ ಶುಕ್ರವಾರ ಬಸವ ಪಂಚಮಿ ಆಚರಣೆ ನಿಮಿತ್ತ ಮಕ್ಕಳಿಗೆ ಹಾಲು ಉಣಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೌಷ್ಟಿಕಾಂಶಯುಕ್ತ ಹಾಲು ಮಣ್ಣು ಪಾಲಾಗಬಾರದು ಎನ್ನುವ ಆಶಯದ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಲನ್ನು ಉಣಿಸುವ ಮೂಲಕ ಭಾರತಾಂಬೆಯ ಕುಡಿಗಳಿಗೆ ಶಕ್ತಿ ತುಂಬಬೇಕು. ನಮ್ಮಲ್ಲಿರುವ ಮೂಢನಂಬಿಕೆ ಹೋಗಲಾಡಿಸಬೇಕು. ಜನರು ಜಾಗೃತರಾಗುವ ಮೂಲಕ ಹಾಲು ಮಣ್ಣಿನ ಪಾಲಾಗದಂತೆ ನೋಡಿಕೊಳ್ಳಬೇಕೆಂದರು.

ಶಾಲಾ ಸಂಸ್ಥೆಯ ನಿರ್ದೇಶಕ ಮುರುಘೇಶ ಬಾನಿ ಮಾತನಾಡಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡಿ ಆರೋಗ್ಯವಂತರನ್ನಾಗಿಸಬೇಕು ಎಂದರು.

ಸಮಾಜ ಸೇವಕರಾದ ಬಸವರಾಜ ಇಟ್ನಾಳ, ಈರಣ್ಣ ಅಡಗಲ್ಲ, ಬಸವರಾಜ ನಾವಿ, ರಮೇಶ ಪಾಟೀಲ, ಶಿಕ್ಷಕರಾದ ಗಜಾನನ ಗಸ್ತಿ, ಲಲಿತಾ ಠಾಣೆ, ಸಂತೋಷ ಮಡಿವಾಳ, ಗಣಪತಿ ಪವಾರ ಇತರರು ಇದ್ದರು.