ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ಮುಸ್ತಾಕ್ ಅಹಮ್ಮದ್ ಬೆಳ್ವೆ ಮಂಗಳವಾರ ವಿತರಿಸಿದರು.  
ಜಿಲ್ಲೆ

ಮಕ್ಕಳಿಗೆ ಕಲಿಕೆಯೊಂದಿಗೆ ಪೂರಕ ಕೊಡುಗೆ

ಇಂದಿರಾ ಎನ್ ಕೆ

ಆರ್ಡಿ: ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಕಾರ್ಯ ಒತ್ತಡದ ನಡುವೆಯೂ ಮುದ್ದು ಮಕ್ಕಳಿಗೆ ಉತ್ತಮ ಸಂಸ್ಕಾರದ ಬಾಲ್ಯದ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ. ಮುದ್ದು ಮಕ್ಕಳಿಗೆ ಕಲಿಕೆಯೊಂದಿಗೆ ಹೆಚ್ಚಿನ ಲವಲವಿಕೆ ಹೊಂದಲು ಪೂರಕವಾಗುವ ನಿಟ್ಟಿನಲ್ಲಿ ಕೊಡುಗೆಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಬೆಳ್ವೆ ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು.
ಆರ್ಡಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬೆಳ್ವೆ ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಪ್ರಾಯೋಜಕತ್ವದಲ್ಲಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ಮಂಗಳವಾರ ವಿತರಿಸಿ ಮಾತನಾಡಿದರು.

ಆರ್ಡಿ-ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಅಧ್ಯಕ್ಷತೆ ವಹಿಸಿದರು. ಆರ್ಡಿ-ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಾಬು ಶೆಟ್ಟಿ ಜಗ್ಲುಗುಡ್ಡೆ, ನಿಕಟಪೂರ್ವ ಕೋಶಾಧಿಕಾರಿ ಚಂದ್ರಿಕಾ ಬೆಳ್ವೆ, ಸದಸ್ಯೆ ಶಶಿಕಲಾ ಅಲ್ಸೆ ಸೆಟ್ಟೋಳಿ, ಸದಸ್ಯ ಕೆ.ಸಂಜೀವ ಆರ್ಡಿ, ಮೀರಾ ಪಿ.ಶೆಟ್ಟಿ ಆರ್ಡಿ, ಆರ್ಡಿ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಶೆಟ್ಟಿ ಆರ್ಡಿ, ಬೆಳ್ವೆ ವಲಯ ಅಂಗನವಾಡಿ ಮೇಲ್ವಿಚಾರಕಿ ರೇವತಿ, ಆರ್ಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪಾರ್ವತಿ, ಸಹಾಯಕಿ ಗುಲಾಬಿ, ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಅಂಗನವಾಡಿ ಮೇಲ್ವಿಚಾರಕಿ ರೇವತಿ ಸ್ವಾಗತಿಸಿ, ಶಶಿಕಲಾ ಅಲ್ಸೆ ಸೆಟ್ಟೋಳಿ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಾಬು ಶೆಟ್ಟಿ ಜಗ್ಲುಗುಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಸುದರ್ಶನ ಶೆಟ್ಟಿ ಆರ್ಡಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ವಂದಿಸಿದರು.
ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕ ಉತ್ತಮ ವಾತಾವರಣ ಹೊಂದಿರಬೇಕು. ದಾನಿಗಳು ಹಾಗೂ ಸಂಘ-ಸಂಸ್ಥೆಗಳು ನೀಡುವ ಕೊಡುಗೆ ಸದುಪಯೋಗಿಸಿಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಮಹತ್ವದ ಹೊಣೆಗಾರಿಕೆಯಿದೆ.