ಕೊಪ್ಪಳ: ಇತ್ತೀಚೆಗೆ ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಬಾಲಕ ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಮಕ್ಕಳ ಮಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಸೂಚಿಸಿದರು.
ತಾಲೂಕಿನ ಇಂದರಗಿ ಗ್ರಾಮದ ಮೃತ ಬಾಲಕ ಮನೆಗೆ ಸೋಮವಾರ ಭೇಟಿ ನೀಡಿ ಸಾಂತ್ವಾನ ಹೇಳಿ ಮಾತನಾಡಿದರು.
ಬಾಲಕ ಇಂದ್ರೇಶ (16) ಶನಿವಾರ ಈಜಾಡಲು ತೆರಳಿದಾಗ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಮೊದಲು ಈಜುಕೊಳಕ್ಕೆ ತೆರಳಿದ ಅಧಿಕಾರಿಗಳು ರಕ್ಷಣಾ ಕ್ರಮಗಳನ್ನು ಪರಿಶೀಲಿಸಿದರು. ಟನೆ ನಡೆದಾಗ ಎಷ್ಟು ಜನರಿದ್ದರು, ಸಿಬ್ಬಂದಿ ಏನು ಮಾಡುತ್ತಿದ್ದರು, ಸುರಕ್ಷತಾ ಕ್ರಮಗಳೇನು ಎಂದು ಕ್ರೀಡಾಧಿಕಾರಿಯನ್ನು ಪ್ರಶ್ನಿಸಿದರು. ಬಳಿಕ ಸಿಸಿವಿಟಿ ದೃಶ್ಯಾವಳಿ ಪರಿಶೀಲಿಸಿದರು. ಮೇಲ್ನೋಟಕ್ಕೆ ಕ್ರೀಡಾ ಇಲಾಖೆ ಸಿಬ್ಬಂದಿ ನಿಷ್ಕಾಳಜಿ ವಹಿಸಿರುವುದು ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಿಐಗೆ ನಿರ್ದೇಶಿಸಿದರು. ಜತೆಗೆ ಇಲಾಖೆಯಿಂದ ಬಾಲಕನ ಕುಟುಂಬಕ್ಕೆ ಪರಿಹಾರ ವಿತರಣೆಗೆ ಸೂಚಿಸಿದರು.
ಬಳಿಕ ಇಂದರಗಿ ಗ್ರಾಮದ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಕುಟುಂಬಕ್ಕೆ ಪರಿಹಾರಕ್ಕೆ ಕ್ರಮವಹಿಸುವಂತೆ ತಹಸೀಲ್ದಾರ್ಗೆ ದೂರವಾಣಿ ಮೂಲಕ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ನಗರಠಾಣೆ ಪಿಐ ಜಯಪ್ರಕಾಶ, ಜಿಲ್ಲಾ ಮಕ್ಕಳ ರಕ್ಷಣಾ ಟಕದ ಪ್ರತಿಭಾ, ರವಿಕುಮಾರ್ ಇದ್ದರು.
ಡಿಸಿ ಭೇಟಿ: ಮೃತ ಬಾಲಕ ಇಂದ್ರೇಶ ಮನೆಗೆ ಭಾನುವಾರ ಡಿಸಿ ನಲಿನ್ ಅತುಲ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಕುಟುಂಬದ ಸ್ಥಿತಿ&ಗತಿ ವಿಚಾರಿಸಿದರು. ಈಜಾಡಲು ತೆರಳಿದ ಮಗ ಮತ್ತೆ ವಾಪಸ್ ಬಾರದಿದ್ದನ್ನು ನೆನೆದು ಕುಟುಂಬದವರು ಕಣ್ಣೀರಾದರು.