ಜಿಲ್ಲೆ

ವಿದ್ಯಾರ್ಥಿಗಳಿಗೆ ಸೂಚನೆ

Kopala - Raveendra V K

ಕೊಪ್ಪಳ: 2024-&25ನೇ ಸಾಲಿನ ನ್ಯಾಷನಲ್​ ಮಿನ್ಸ್​ ಕಮ್​ ಮೆರಿಟ್​ ಸ್ಕಾಲರ್​ಶಿಪ್​ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ 162 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.

ಕೊಪ್ಪಳ ತಾಲೂಕಿನ 73, ಗಂಗಾವತಿ 42, ಕುಷ್ಟಗಿ 28, ಯಲಬುರ್ಗಾ 19 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರತಿ ತಿಂಗಳು 1 ಸಾವಿರ ರೂ.ನಂತೆ 4 ವರ್ಷ ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್​ ಖಾತೆಗೆ ಜಮಾ ಆಗಲಿದೆ. ಹಿಂದಿನ ವರ್ಷಗಳಲ್ಲಿ ಆಯ್ಕೆಯಾಗಿರುವ 10, 11, 12ನೇ ತರಗತಿ ವಿದ್ಯಾರ್ಥಿಗಳು ಓಟಿಆರ್​ ನಂಬರ್​ ಮೂಲಕ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಡಿಡಿಪಿಐ ತಿಳಿಸಿದ್ದಾರೆ.