ಜಿಲ್ಲೆ

ಸಿಬಿಎಸ್​ಸಿ ವಾರ್ಷಿಕ ಪರೀೆ ಇಂದಿನಿಂದ

Kopala - Raveendra V K

ಕೊಪ್ಪಳ: ಸಿಬಿಎಸ್​ಇ 10 ಮತ್ತು 12ನೇ ತರಗತಿ ವಾರ್ಷಿಕ ಪರೀೆಗಳು ೆ.15ರಿಂದ ಏಪ್ರೀಲ್​ 4ವರೆಗೆ ಕೊಪ್ಪಳ ಹಾಗೂ ಗಂಗಾವತಿಯ 4 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಕೇಂದ್ರಗಳ ಸುತ್ತ 200 ಮೀಟರ್​ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ನಲಿನ್​ ಅತುಲ್​ ಆದೇಶಿಸಿದ್ದಾರೆ.

ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಕೊಪ್ಪಳ-ದದೇಗಲ್​ (ಗದಗ ರಸ್ತೆಯ) ಮಿಲೆನಿಯಂ ಪಬ್ಲಿಕ್​ ಸ್ಕೂಲ್​ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್​ ಸ್ಕೂಲ್​ ಮತ್ತು ಗಂಗಾವತಿಯ ಸೆಂಟ್​ ಫಾಲ್ಸ್​ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ಕೇಂದ್ರಗಳಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಇರಲಿವೆ.