ಜಿಲ್ಲೆ

ಸಾಮಾಜಿಕ ಜಾಲತಾಣದಿಂದ ಅಂತರ

ಇಂದಿರಾ ಎನ್ ಕೆ

ಕೋಟ: ಇಂದು ಬದುಕಿನ ಬಹುಭಾಗವನ್ನು ಅತಿಕ್ರಮಿಸಿರುವ ಸಾಮಾಜಿಕ ಜಾಲತಾಣ ಸಮಾಜದ ನೆಮ್ಮದಿಯನ್ನೇ ಕಲಕುವ ಮಟ್ಟಿಗೆ ಬೆಳೆದು ಬಿಟ್ಟಿದೆ. ಅದರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡು ಮೌಲ್ಯಯುತ ವ್ಯಕ್ತಿತ್ವ ಕಟ್ಟಿಕೊಳ್ಳುವ ತುರ್ತು ಅಗತ್ಯತೆ ಇದೆ ಎಂದು ಬಾರ್ಕೂರಿನ ರುಕ್ಮಿಡಿ ಶೆಡ್ತಿ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಪ್ರತಿಪಾದಿಸಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಪಂಚಾಯಿತಿ ಅಧ್ಯಕ್ಷ ರಾಗಿಣಿ ದೇವಾಡಿಗ ಮಾತನಾಡಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದತ್ತಿ ಬಹುಮಾನ ಪಟ್ಟಿಯನ್ನು ಶಿಕ್ಷಕಿ ಜಯಶ್ರೀ, ಸಾಂಸ್ಕೃತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಸುಧಾಬಾಯಿ ನಾಯಕ್ ಮತ್ತು ಅನುರಾಧ, ಕ್ರೀಡಾ ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಂಜುನಾಥ್ ಹೊಳ್ಳ ಹಾಗೂ ಉದಯ ಮಡಿವಾಳ ಎಂ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರತಿಭಾನ್ವಿತರ ಪಟ್ಟಿಯನ್ನು ಶ್ರೀಕಾಂತ್, ಹಿಂದಿನ ವರ್ಷದ ಕಲಿಕೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳ ಪಟ್ಟಿಯನ್ನು ರೇಷ್ಮಾ ಕುಮಾರಿ ಮತ್ತು ಈ ವರ್ಷದ ಕಲಿಕಾ ಸಾಧಕರ ಪಟ್ಟಿಯನ್ನು ಭಾಷಾ ಹಾಸನ್ ಸಾಬ್ ಇವರು ವಾಚಿಸಿದರು.

ಕೆಪಿಎಸ್ ಕೋಟೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಶೆಟ್ಟಿ, ಸಂಸ್ಥೆ ನಿವೃತ್ತ ಚಿತ್ರ ಕಲಾ ಅಧ್ಯಾಪಕ ಡಾ.ರಾಧಾಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು. ಅಧ್ಯಾಪಕಿ ಸುಚೇತಾ ಭಟ್ ಸ್ವಾಗತಿಸಿದರು. ಶಿಕ್ಷಕಿ ಪೀತಾಂಬರಿ ವಂದಿಸಿದರು. ಅಧ್ಯಾಪಕ ರಮಾನಂದ ನಾಯಕ್ ಹಾಗೂ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ, ದಿವ್ಯಪ್ರಭ, ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಮಡಿವಾಳ ಎಂ, ವಾಸುದೇವ್ ಗಂಗೇರ್ ಸಹಕರಿಸಿದರು.