ಜಿಲ್ಲೆ

ಕಲಬುರಗಿ ಜಿಲ್ಲಾ ಲೇವಾದೇವಿಗಾರರ ಸಂಘದ ಅದ್ಯಕ್ಷರಾಗಿ ಸುಭಾಷ್ ಕಮಲಾಪುರೆ ಮರು ಆಯ್ಕೆ : ಕಾರ್ಯದರ್ಶಿ ಯಾಗಿ ಕಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಬಸವರಾಜ ಖಾನಾಪುರ ಆಯ್ಕೆ

ಲೇವಾದೇವಿಗಾರರ ಸಂಘದ ವಾರ್ಷಿಕ ಮಹಾಸಭೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಲೇವಾದೇವಿಗಾರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಸುಭಾಷ ಕಮಲಾಪುರೆ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.
ಸಭೆಯಲ್ಲಿ  ೨೦೨೨-೨೩ನೇ ಸಾಲಿನ ಲೆಕ್ಕಪತ್ರವನ್ನು ಮಂಡನೆ ಮಾಡಲಾಯಿತು. ಚರ್ಚೆ ನಡೆಸಿ ಅನುಮೋದನೆ ನೀಡಲಾಯಿತು. ಅಲ್ಲದೆ ೨೦೨೩-೨೮ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷರಾಗಿ ಸುಭಾಷ ಕಮಲಾಪುರೆ ಅವರು ಮತ್ತೊಮ್ಮೆ ಸರ್ವಾನುಮತದಿಂದ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಬಾಪುರಾವ ಪಾಗಾ, ಮಲ್ಲಿಕಾರ್ಜುನ ಮೇಳಕುಂದಿ, ವಿಜಯಕುಮಾರ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಕಶೆಟ್ಟಿ ಬಾಚನಾಳ, ಸಹ ಕಾರ್ಯದರ್ಶಿಯಾಗಿ ಬಸವರಾಜ ಜಗನ್ನಾಥ ಖಾನಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ ಶ್ರೀಗಿರಿ, ಕೋಶಾಧ್ಯಕ್ಷರಾಗಿ ಜಗನ್ನಾಥ ತಡಕಲ್ ಅವರು ಆಯ್ಕೆಯಾದರು.
ಸುಭಾಷ ಕಮಲಾಪುರೆ ಸ್ವಾಗತಿಸಿದರು. ಬಸವರಾಜ ಖಾನಾಪುರ ವಂದಿಸಿದರು. ಸಭೆಯಲ್ಲಿ ಜಿಲ್ಲೆಯ ಎಲ್ಲಡೆಯಿಂದ ಆಗಮಿಸಿದ್ದ ಸಂಘದ  ಸದಸ್ಯರು ಪಾಲ್ಗೊಂಡಿದ್ದರು.
==