ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮದ ಗಾಂಧಿ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. 
ಜಿಲ್ಲೆ

ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ

ರವಿಕುಮಾರ್ ಪಿ. ಕೆ

ಅರಕಲಗೂಡು: ತಾಲೂಕಿನ ಕೇರಳಾಪುರ ಗ್ರಾಮದ ಗಾಂಧಿ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ ಸೋಮವಾರ ಅತ್ಯಂತ ವೈಭವೋಪೇತವಾಗಿ ಜರುಗಿತು.

ಅಪಾರ ವೆಚ್ಚದಲ್ಲಿ ಪೆಂಡಾಲ್ ಸ್ಥಾಪಿಸಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗೆ ನಿತ್ಯ ವಿಶೇಷ ಪೂಜೆ ಪುನಸ್ಕಾರಗಳನ್ನು ವಿಧಿವಿತ್ತಾಗಿ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಸೋಮವಾರ ಮಧ್ಯಾಹ್ನದ ನಂತರ ಗಣೇಶ ಮೂರ್ತೀಯ ವಿಸರ್ಜನಾ ಮೆರವಣಿಗೆಗೆ ವಿಜೃಂಭಣೆಯ ಚಾಲನೆ ನೀಡಲಾಯಿತು.

ಭವ್ಯ ಮೆರವಣಿಗೆಯಲ್ಲಿ ನಂದಿ ಮೇಲೆ ಕುಳಿತ ಶಿವ ಪಾರ್ವತಿ, ಶ್ರೀರಾಮ, ಬುದ್ಧ, ಶ್ರೀ ವೆಂಕಟೇಶ್ವರ, ಲಕ್ಷ್ಮೀ, ಸೊಂಡಿಲು ಮೇಲೆತ್ತಿದ ಅವತಾರ ಗಣಪ, ಶಕ್ತಿದೂತ ಅಂಜನೇಯಸ್ವಾಮಿ, ಶಿವಲಿಂಗು ಅಕ್ಕಪಕ್ಕ ಕುಳಿತ ಚಾಮುಂಡೇಶ್ವರಿ ಮೂರ್ತಿಗಳು, ಶ್ರೀ ಕೃಷ್ಣ ರಾಧೆಯ ಆಕರ್ಷಕ ಭಂಗಿಯಲ್ಲಿರುವ ಬಗೆ ಬಗೆಯಾಗಿ ಸಿಂಗರಿಸಿದ ಕಲಾಕೃತಿಗಳನ್ನು ಹೊತ್ತು ಸಾಲಾಗಿ ಅಲಂಕೃತ ವಾಹನಗಳಲ್ಲಿ ಉತ್ಸವ ಸಾಗಿದ್ದು ಜನರ ಗಮನ ಸೆಳೆಯಿತು.

ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಮೈಸೂರಿನ ಮಹಿಳಾ ನೃತ್ಯ ಕಲಾವಿದರು ಹಾಗೂ ಸ್ಥಳೀಯ ಯುವಕರು ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದರು.