ಭದ್ರಾವತಿಯ ಹಿಂದು ಮಹಾಸಭಾ ಗಣಪತಿ  
ಜಿಲ್ಲೆ

ಸೆ.26ಕ್ಕೆ ಭದ್ರಾವತಿ ಹಿಂದು ಮಹಾಸಭಾ ಗಣಪತಿ ವಿಸರ್ಜನೆ

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದು ಮಹಾಸಭಾ-ಹಿಂದು ರಾಷ್ಟçಸೇನಾ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಯು ಸೆ.26ರಂದು ಅದ್ದೂರಿಯಾಗಿ ನಡೆಯಲಿದ್ದು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ.
ಬೆಳಗ್ಗೆ 10.30ಕ್ಕೆ ಗಣಪತಿ ವಿಸರ್ಜನಾ ಮೆರವಣಿಗೆ ಆರಂಭವಾಗಲಿದ್ದು ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ನಗರಸಭೆ, ತಾಪಂ ಅಧ್ಯಕ್ಷರು, ಸದಸ್ಯರು, ಚುನಾಯಿತ ಪ್ರತಿನಿಽಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಮೆರವಣಿಗೆಯು ಹೊಸಮನೆ ಬಡಾವಣೆಯಿಂದ ರಂಗಪ್ಪವೃತ್ತ, ಸಿ.ಎನ್.ರಸ್ತೆ. ಹಾಲಪ್ಪವೃತ್ತದ ಮೂಲಕ ಹುತ್ತಾ ಬಸ್ ನಿಲ್ದಾಣದವರೆಗೂ ಸಾಗಲಿದೆ. ನಂತರ ಸಂಜೆ ೬.೩೦ರ ಸಮಯಕ್ಕೆ ನಗರಸಭೆ ಕಚೇರಿ ಎದುರಿನ ಭದ್ರಾ ನದಿಯಲ್ಲಿ ವಿಸರ್ಜಿಸಲಾಗುವುದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ, ತಮಿಳುನಾಡಿನ ಬ್ಯಾಂಡ್‌ಸೆಟ್ ಸೇರಿ ೧೪ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ.
ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ನಗರದಲ್ಲಿ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ. 10 ಡಿಎಸ್‌ಪಿ, 17ಇನ್‌ಸ್ಪೆಕ್ಟರ್, 47 ಸಬ್ ಇನ್‌ಸ್ಪೆಕ್ಟರ್, 80 ಎಎಸ್‌ಐ, 500 ಕಾನ್‌ಸ್ಟೆಬಲ್ 600 ಹೋಂಗಾರ್ಡ್ಸ್, 8 ಕೆಎಸ್‌ಆರ್‌ಪಿ ತುಕಡಿ, 1 ರ‍್ಯಾಪಿಡ್ ಆ್ಯಕ್ಷನ್ -ೆÇÃರ್ಸ್, 10 ಡಿಎಆರ್ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.