ಮೈಸೂರು: ಕೆಪಿಟಿಸಿಎಲ್ ನಗರದ ವಿವಿಧ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಸೆ.20 ರಂದು ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್‌ಟಿಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಸುಭಾಷ್‌ನಗರ, ಕೆಸರೆ 1 ರಿಂದ 3ನೇ ಹಂತ, ಎನ್.ಆರ್. ಮೊಹಲ್ಲ, ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ವೀರನಗೆರೆ, ಉದಯಗಿರಿ, ಬನ್ನಿಮಂಟಪ, ನೆಲ್ಸನ್ ಮಂಡೇಲ ರಸ್ತೆ, ಎಲ್ಐಸಿ, ಹೈವೆ ವೃತ್ತ, ತಿಲಕ್‌ನಗರ, ಉಮ್ಮರ್‌ಖಯಂ ರಸ್ತೆ, ನ್ಯೂ ಸಯ್ಯಜಿ ರಾವ್ ರಸ್ತೆ, ರಾಜೇಂದ್ರನಗರ, ಮೇದರ ಬ್ಲಾಕ್, ಬಂಬೂ ಬಜಾರ್, ಲಯನ್ಸ್ ಕ್ಲಬ್, ಫರೂಕೀಯ ಡೆಂಟಲ್ ಕಾಲೇಜು, ಜೈಲ್ ವಸತಿ ಗೃಹ, ಐಟಿಐ ಕಾಲೇಜು, ಭಾವನಾ ಮಾರ್ಬಲ್ ರಸ್ತೆ, ಎ ಬಡಾವಣೆ, ಬಿಬಿ ಕೇರಿ, ಬಿ.ಟಿ. ಮಿಲ್ ರಸ್ತೆ, ಈದ್ಗ ಮೈದಾನ, ಕಬೀರ್ ಮಠ, ಆನೆಗುಂದಿ ರಸ್ತೆ, ಹನುಮಂತನಗರ, ಕೆಎಸ್‌ಆರ್‌ಟಿಸಿ, ಎಸ್.ಎಸ್.ನಗರ, ಕಾವೇರಿ ನಗರ, ಸಿದ್ದಿಖಿ ನಗರ, ಬನ್ನಿಮಂಟಪ ಸಿ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ 10 ರಿಂದ ಸಂಜೆ 6ರವರೆಗೆ ದಟ್ಟಗಳ್ಳಿ 3ನೇ ಹಂತ, ತ್ರಿವೇಣಿ ಸೂಪರ್ ಮಾರ್ಕೆಟ್, ಕದಂಬ ಬೇಕರಿ, ಮುಖ್ಯ ಇಂಜಿನಿಯರ್ ಕಚೇರಿ, ದಟ್ಟಗಳ್ಳಿ ಐ ಬ್ಲಾಕ್, ಮುಡಾ ನೌಕರರ ಬಡಾವಣೆ, ಕನಕದಾಸನಗರ, ಆದಿತ್ಯ ವೃತ್ತ, ಸೋಮನಾಥನಗರ, ಕೇರ್ಗಳ್ಳಿ ಮಹಾಲಕ್ಷ್ಮೀ ಬಡಾವಣೆ, ಕಲ್ಕಿ ಬಡಾವಣೆ, ದಟ್ಟಗಳ್ಳಿ ನಂದಿ ಸರ್ಕಲ್, ಜೋಡಿ ಬೇವಿನಮರ, ಆಂದೋಲನ ವೃತ್ತ, ರಾಮಕೃಷ್ಣನಗರ, ಆರ್‌ಟಿ ನಗರ, ಲಿಂಗಾಂಬುದಿಪಾಳ್ಯ, ವಿಶ್ವ ವಿದ್ಯಾಲಯ ಬಡಾವಣೆ, ವಾಸು ಬಡಾವಣೆ, ಕೆ ಬ್ಲಾಕ್, ಆರ್.ಕೆ. ನಗರ, ಮೂಗನಹುಂಡಿ, ನಗರ್ತಹಳ್ಳಿ, ದೇವಗಳ್ಳಿ, ಬಲ್ಲಳ್ಳಿ ಅನಗಳ್ಳಿ, ತಿಬ್ಬಯ್ಯನ ಹುಂಡಿ, ಬೀರಿಹುಂಡಿ ಐ.ಪಿ.ಲಿಮಿಟ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ದೂರ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆ.10 ರಿಂದ ಸಂಜೆ 5.30ರವರೆಗೆ ದೂರ, ತಳೂರು, ಮುರುಡಗಳ್ಳಿ, ದೊಡ್ಡಕಾಟೂರು, ಚಿಕ್ಕ ಕಾಟೂರು, ಸಿಂಧುವಳ್ಳಿ ಗ್ರಾಮ, ನಂಜುಂಡೇಶ್ವರ ಬಡಾವಣೆ, ಹಳ್ಳಿಕೆರೆಹುಂಡಿ, ಬಿದರಗೂಡು, ಮೂಡಲಹುಂಡಿ (ಕಾಟೂರು) ನೀರು ಸರಬರಾಜು ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.