N.S.BOSARAJU 
ಜಿಲ್ಲೆ

ಸಭಾಪತಿಗೆ ಅಗೌರವ ಖಂಡನೀಯ-ಎನ್‌ಎಸ್‌ಬಿ

ರಾಯಚೂರು ಅಽವೇಶನಲ್ಲಿ ಶಾಸಕರು ಸಭಾಪತಿಗಳಿಗೆ ಮಾಡಿದ ವೈಯಕ್ತಿಕ ಅಗೌರವ ಮಾತ್ರವಲ್ಲದೇ ಪೀಠಕ್ಕೆ ಮಾಡಿದ ಅಗೌರವ ಖಂಡನೀಯವಾಗಿರುವುದರಿAದ ಮುಂದಿನ ದಿನಗಳಲ್ಲಿ ಯಾರೂ ಕೂಡ ಈ ರೀತಿಯಾಗಿ ಮಾಡಬಾರದೆಂದು ಸ್ಪೀಕರ್ ೧೮ ಶಾಸಕರನ್ನು ಅಮಾನತ್ತು ಮಾಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಮಂಡಲಕ್ಕೆ ತನ್ನದೇ ಆದ ನಿಯಮಗಳಿವೆ ಎಲ್ಲರೂ ಪಾಲಿಸಲೇಬೇಕು. ವಿಧಾನಸಭೆಯ ನಿಯಮಗಳನ್ನು ಗಾಳಿಗೆ ತೂರುವುದು ಸರಿಯಲ್ಲ. ಯಾರೂ ಕೂಡ ಹಾಗೆ ಮಾಡುವಂತಿಲ್ಲ. ನಿಯಮಗಳನ್ನು ಉಲ್ಲಂöಸುವುದು ಅಗೌರವ ತೋರುವುದು. ಸಂವಿದಾನಕ್ಕೆ ಮಾಡಿದ ಅಪಚಾರವಾಗಿರುತ್ತದೆ. ಸಭಾಪತಿಗಳ ಪೋಡಿಯಂ ಬಳಿ ಹೋಗಿ ಅಶಿಸ್ತಿನಿಂದ ವರ್ತಿಸಬಾರದು. ಇತಿಹಾಸದಲ್ಲಿ ಈ ರೀತಿಯ ಘಟನೆಗಳು ನಡೆದಿಲ್ಲವೆಮದು ಅಸಮದಾನ ವ್ಯಕ್ತಪಡಿಸಿದರು.

ಆರ್.ಅಶೋಕ ನಂತಹ ಜವಾಬ್ದಾರಿಯುತ ರಾಜಕಾರಣಿ ಈ ರೀತಿಯಾಗಿ ನಡೆದುಕೊಂಡಿರುವುದು ಸರಿಯಲ್ಲ. ಕಾಂಗ್ರೆಸ್ ಶಾಸಕರನ್ನು ತಳ್ಳುವಂತಹ ವಿಡಿಯೋಗಳು ಈಗಾಗಲೇ ಕಾಣಿಸಿಕೊಂಡಿವೆ. ವಿಜಯೇಂದ್ರ ಅವರು ಈ ಘಟನೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ವಿಜಯೇಂದ್ರರನ್ನು ಅವರ ಪಕ್ಷದವರೇ ಒಪ್ಪುತ್ತಿಲ್ಲ. ವಿಜಯೇಂದ್ರ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಿ ಇಲ್ಲವೆಂದರು.

ಸತೀಶ ಜಾರಕಿಹೊಳಿ ಕೇವಲ ಇಷ್ಟು ಜನ ಅಷ್ಟು ಜನರ ಮೇಲೆ ಹನಿಟ್ರ‍್ಯಾಪ್ ಆಗಿದೆ ಎಂದು ಹೇಳುತ್ತಿದ್ದು, ಯಾರು ಎಂದು ಹೇಳುತ್ತಿಲ್ಲವಲ್ಲ.? ಹನಿಟ್ರ‍್ಯಾಪ್ ಮಾಡುವವರು ಈ ಪಾರ್ಟಿ ಆ ಪಾರ್ಟಿ ಎಂದು ನೋಡುವುದಿಲ್ಲ. ಮಂತ್ರಿಗಳನ್ನು ಟಾರ್ಗೇಟ್ ಮಾಡುತ್ತಾರೆ. ಅವರನ್ನು ಕಂಡುಹಿಡಿಯುವುದು ಸರ್ಕಾರದ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ಕ್ರಮವನ್ನೂ ಸರ್ಕಾರದಿಂದ ತೆಗೆದುಕೊಳ್ಳಲಾಗುತ್ತದೆ.

ಸದಾಶಿವ ನಗರದ ಸಿಡಿ -Á್ಯಕ್ಟರಿ ಬಂದ್ ಆಗಬೇಕೆಂಬ ಘೋಷಣೆಗಳನ್ನು ಕೆಲವು ಶಾಸಕರು ಕೂಗುತ್ತಿದ್ದರು. ಸದಾಶಿವ ನಗರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದವರಿದ್ದಾರೆ. ಯಾರಿಗೆ ಏನು ಬೇಕೋ ಅದನ್ನೇ ಮಾತನಾಡುತ್ತಾರೆ. ಆದರೆ ವಿಧಾನಸಭೆಯಲ್ಲಿ ಈ ರೀತಿಯ ಘಟನೆಗಳು ನಡೆದಿರುವುದನ್ನು ಖಂಡಿಸಬೇಕು ಎಂದರು.