ಜಿಲ್ಲೆ

ಸರ್ಕಾರದಿಂದ ಹಿಂದು ಸಂತರಿಗೆ ಅಗೌರವ

ವಿಜಯಪುರ: ರಾಜ್ಯ ಸರ್ಕಾರ ಹಿಂದು ಸಂತರನ್ನು ಅತ್ಯಂತ ಅಗೌರವದಿಂದ ನಡೆಸಿಕೊಂಡಿದೆ. ಕನ್ಹೇರಿ ಶ್ರೀಗಳಿಗೆ ವಿಜಯಪುರ ಮತ್ತು ಬಾಗಲಕೋಟೆ ಪ್ರವೇಶದ ಸರ್ಕಾರದ ನಿರ್ಧಾರ ಖಂಡಿಸಿ ಯಾವ ರೀತಿಯ ಹೋರಾಟ ರೂಪಿಸಬೇಕು ಎಂಬ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಅ. ೨೯ರಂದು ಬೆಳಗಾವಿಯಲ್ಲಿ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಅಂದು ನಡೆಯುವ ಸಭೆಯಲ್ಲಿ ಹಲವು ಹಿಂದುಪರ ಹೋರಾಟಗಾರರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರ ಹಿಂದು ಸಮಾಜ, ವೀರಶೈವ ಹಾಗೂ ಲಿಂಗಾಯತ ಸಮಾಜಕ್ಕೆ ತೊಂದರೆ ಕೊಡುತ್ತಿದೆ. ವೀರಶೈವ ಸಮಾಜವನ್ನು ತುಂಡು ತುಂಡು ಮಾಡುತ್ತಿದೆ. ಹಿಂದು ಸಮಾಜಗಳಿಗೆ ತೊಂದರೆ ಕೊಡುವ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಧು ಸಂತರನ್ನು ಬಿಡುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಕನ್ಹೇರಿ ಶ್ರೀಗಳಿಗೆ ನಿರ್ಬಂಧ ಹಾಕಿರುವ ವಿಷಯದ ಕುರಿತು ಪ್ರತಿಭಟಿಸಬೇಕು. ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಸರ್ಕಾರವನ್ನು ಮಣಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪ್ರಮೋದ ಮುತಾಲಿಕ, ಸಿ.ಟಿ. ರವಿ, ಪ್ರತಾಪ ಸಿಂಹ, ಅರವಿಂದ ಬೆಲ್ಲದ, ನಾರಾಯಣದಾ ಭಾಂಡಗೆ, ಈರಣ್ಣ ಕಡಾಡಿ, ಅಭಯ ಪಾಟೀಲ, ಸಂಜಯ ಪಾಟೀಲ, ಅರುಣ ಶಹಾಪೂರ ಸೇರಿ ಹಲವರು ಸಭೆಗೆ ಬರಲು ಒಪ್ಪಿಗೆ ಸೂಚಿಸಿz್ದÁರೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಈ ಸಭೆಗೆ ಬರುವಂತೆ ಕನ್ಹೇರಿ ಶ್ರೀಗಳಿಗೂ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ರಾಜ್ಯ ಸರ್ಕಾರ ಕಿವಿ ಹಿಂಡಲು ಲಕ್ಷಾಂತರ ಜನ ಸೇರಬೇಕು. ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಹಾಕಿರುವ ನಿರ್ಬಂಧ ಹಿಂತೆಗೆದುಕೊಳ್ಳಬೇಕು. ಈ ವಿಷಯವಾಗಿ ಇಡೀ ಸಮಾಜಕ್ಕೆ ಆಕ್ರೋಶವಿದೆ. ಈ ಸರ್ಕಾರ ಬಂದಾಗಿನಿAದ ಹಿಂದು ಸಮಾಜಗಳಿಗೆ ಹಲವು ತೊಂದರೆ ಕೊಡುತ್ತಿದೆ ಎಂದರು.

ವಿಜಯಪುರ  ಉಸ್ತುವಾರಿ ಸಚಿವರಿಗೆ ಏನೇನು ಕಲ್ಪನೆ ಇಲ್ಲ. ವೀರಶೈವ ಲಿಂಗಾಯತರನ್ನು ಒಡೆಯಲು ಇವರೇ ಕಾರಣ ಎಂದರಲ್ಲದೇ, ಕೆಲವು ಸ್ವಾಮೀಜಿಗಳು ಹಿಂದು ಧರ್ಮದ ಬಗ್ಗೆ ಅಗೌರವ ತೋರಿz್ದÁರೆ. ಮಾಂಸ ತಿನ್ನಿ, ದೇವಾಲಯಕ್ಕೆ ಹೋಗಬೇಡಿ, ಮದ್ಯ ಸೇವಿಸಿರಿ ಎಂದು ಹೇಳುತ್ತಿರೆ. ಅದನ್ನು ಯಾರು ಸಮರ್ಥಿಸಿಕೊಳ್ಳುತ್ತಾರೆ ಹೇಳಿ ಎಂದರು.

ಕುರುಬರಿಗೆ ಎಸ್‌ಟಿ ಪಟ್ಟಿಗೆ ಸೇರಿಸುವ ಕುರಿತು ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ಈ ವಿಷಯ ಕೇಂದ್ರ ಸರ್ಕಾರಕ್ಕೆ ಹೋಗಿದೆ. ಉಗ್ರಪ್ಪನವರು ಉಗ್ರಾವತಾರ ತಾಳಿದ ಪರಿಣಾಮ ಈ ಹೋರಾಟ ನಾನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿz್ದÁರೆ. ಈ ವಿಷಯದಲ್ಲಿ ಸಿ.ಎಂ. ಹಾಲುಮತ ಸಮಾಜದವನ್ನು ಕತ್ತಲಲ್ಲಿಎಂದರು.