ಜಿಲ್ಲೆ

ಡಿಸಿ ನ್ಯಾಯಾಲಯದಲ್ಲಿ ಅನರ್ಹತೆ ಆದೇಶ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ
ನಗರಸಭೆಯಲ್ಲಿ ವಿಪ್ ಉಲ್ಲಂಘಿಸಿದ ಸ್ವಪಕ್ಷೀಯ ಸದಸ್ಯರಿಗೆ ಈ ಬಾರಿ ಪಾಠ ಕಲಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಹೌದು! ಇಲ್ಲಿನ ಕೈ ಪಾಳಯದಲ್ಲಿ ವಿಪ್ ಉಲ್ಲಂನೆ, ಅಡ್ಡ ಮತದಾನ, ಎದುರಾಳಿ ಪಕ್ಷ ಸೇರ್ಪಡೆ ಹೊಸದೇನಲ್ಲ. ಹಲವು ವರ್ಷಗಳಿಂದಲೂ ಪಕ್ಷ ನಿಷ್ಠೆಯನ್ನು ಬದಿಗಿರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುವಂತಹುದಾಗುತ್ತಿದೆ. ಇದಕ್ಕೆ ಅನುಗುಣವಾಗಿ ವರಿಷ್ಠರು ಎಚ್ಚರಿಕೆ ನೀಡುವುದರಲ್ಲಿಯೇ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಚಿಕ್ಕಬಳ್ಳಾಪುರ ನಗರಸಭೆಯ 6 ಸದಸ್ಯರನ್ನು ಅನರ್ಹಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ರಾಜ್ಯ‌ ಉಚ್ಚ ನ್ಯಾಯಾಲಯವು ಅನರ್ಹತೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

*ನಗರಸಭೆಯಲ್ಲಿ ಹಳೇ ಚಾಳಿ
ಹಿಂದೆ ನಗರಸಭಾ ಅಧ್ಯಕ್ಷರಾಗಿ   ಹಲವರು ಆಯ್ಕೆಯಾದ ಸಂದರ್ಭಗಳಲ್ಲಿ ಕಾಂಗ್ರೆಸ್ ಸದಸ್ಯರು ಪಕ್ಷ ಭೇದವಿಲ್ಲದೇ ಎದುರಾಳಿಗಳನ್ನು ಬೆಂಬಲಿಸಿ, ಮತ ಚಲಾಯಿಸಿದ ಪ್ರಕರಣಗಳು ಹಲವು ಬಾರಿ ವರದಿಯಾಗಿವೆ. ಪಕ್ಷ ನಿಷ್ಠೆಗಿಂತಲೂ ಸ್ವಯಂ ಲಾಭದ ಲೆಕ್ಕಾಚಾರಕ್ಕೆ ಮಣೆ ಹಾಕಲಾಗಿದೆ. ಇದಕ್ಕೆ ವರಿಷ್ಠರು ಪಕ್ಷದಿಂದ ತಾತ್ಕಾಲಿಕ ಉಚ್ಚಾಟನೆ, ಬಳಿಕ ಆಲಿಂಗನದ ಧೋರಣೆಯಲ್ಲಿ ರ್ನಿಲಕ್ಷಿ ್ಯಕ್ಕಿಕೊಂಡು ಬಂದಿದ್ದು ಪಕ್ಷಾಂತರ, ವಿಪ್ ಉಲ್ಲಂನೆಯು ಇಲ್ಲಿ ದೊಡ್ಡ ಚಾಳಿಯಾಗಿದೆ.

*ನ್ಯಾಯಾಲಯದಲ್ಲಿ ತಡೆಯಾಜ್ಞೆ
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ನಗರಸಭೆ ಸದಸ್ಯರ ಅನರ್ಹತೆಯ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹಾಗೂ ನಗರಸಭಾ ಸದಸ್ಯ ಅಂಬರೀಷ್ ನೀಡಿದ್ದ‌ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕಾಂಗ್ರೆಸ್ ನ 6 ಸದಸ್ಯರನ್ನು ( ನೇತ್ರಾವತಿ,‌ ನಿರ್ಮಲಪ್ರಭು, ಸ್ವಾತಿ ಮಂಜುನಾಥ್, ಸತೀಶ್, ಅಂಬಿಕಾ, ರತ್ನಮ್ಮ) ಅನರ್ಹಗೊಳಿಸಿದ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಐವರು ಹೈಕೋರ್ಟ್ ನ ಮೆಟ್ಟಲೇರಿದ್ದು ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದೆ. ಇದರಿಂದ ಸದಸ್ಯರು ಸಧ್ಯ ನಿಟ್ಟುಸಿರು ಬಿಡುವಂತಾಗಿದೆ.
31 ಸದಸ್ಯರನ್ನು ಹೊಂದಿರುವ ಇಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2, ಪಕ್ಷೇತರ 4 ಸದಸ್ಯರಿದ್ದು ಕಳೆದ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ 6 ಸದಸ್ಯರು ಮಾತೃಪಕ್ಷಕ್ಕೆ ಕೈ ಕೊಟ್ಟಿದ್ದು ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್, ವಿಪ್ ಉಲ್ಲಂಘನೆ ಹಾಗೂ ಪಕ್ಷಾಂತರ ವಿರೋಧ ಕಾಯ್ದೆ ಅನ್ವಯ ಸದಸ್ಯರನ್ನು ಅನರ್ಹಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.