ಪಿರಿಯಾಪಟ್ಟಣ: ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿರುವುದನ್ನು ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗೃಹ ಸಚಿವ ಅಮಿತ್ ಷಾ ಅವರ ಭಾವಚಿತ್ರವನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಷಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಮುಖಂಡ ಸೀಗೂರು ವಿಜಯಕುಮಾರ್ ಆಗ್ರಹಿಸಿದರು. ತಹಸೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಈರಯ್ಯ, ಮುಖಂಡ ಜಿ.ಬಸವನಳ್ಳಿ ನಾರಾಯಣ, ವಿವಿಧ ಸಂಘಟನೆಗಳ ಮುಖಂಡರಾದ ಪಿ.ಮಹದೇವ್, ಎಚ್.ಡಿ.ರಮೇಶ್, ಇಕ್ಬಾಲ್ ಷರೀಫ್, ರಾಜಣ್ಣ, ಮೋಹನ್, ಪದ್ಮಲತಾ, ರಾಜೇಶ್, ಮುರಳಿ, ಅನಿಲ್ ಕುಮಾರ್, ದೇವರಾಜ್, ರಾಜಯ್ಯ, ಆರ್.ಡಿ.ಮಹದೇವ, ರಾಜಶೇಖರ್, ಜಯಣ್ಣ, ವಾಜಿದ್, ಶೇಖರ್, ಸೈಯದ್ ಹನೀಫ್, ಪುಟ್ಟಯ್ಯ, ಶಿವಣ್ಣ ಇತರರು ಇದ್ದರು.