ಭದ್ರಾವತಿ: ಗ್ರಾಮಪಂಚಾಯಿತಿ ಸದಸ್ಯರು ಅಕ್ರಮವಾಗಿ ಗ್ರಾಮ ಠಾಣಾ ಜಾಗವನ್ನು ಖಾತೆ ಮಾಡಿಕೊಂಡಿದ್ದು ಅವರ ಸದಸ್ಯತ್ವ ವಜಾಗೊಳಿಸುವಂತೆ ಹಾಗೂ ಖಾತೆ ಮಾಡಿಕೊಳ್ಳಲು ಸಹಕಾರ ನೀಡಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿರಿಯೂರು ಗ್ರಾಮಾಭಿವೃದ್ಧಿ ಹೋರಾಟ ಸಮಿತಿ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ಡಿಎಸ್‌ಎಸ್ ಕಾರ್ಯಕರ್ತರು ಹಿರಿಯೂರು ಗ್ರಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಹಳೇ ಹಿರಿಯೂರು ಗ್ರಾಮಠಾಣಾದ 17.04 ಎಕರೆ ಜಾಗದಲ್ಲಿ ಸರ್ಕಾರದಿಂದ 1992ನೇ ಇಸವಿಯಲ್ಲಿ 139 ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿದ್ದು ಉಳಿದ ಜಾಗವನ್ನು ಗ್ರಾಮದ ನಿವೇಶನ ರಹಿತ ಬಡ ಕುಟುಂಬಗಳಿಗೆ ಹಂಚಿಕೆ ಮಾಡದೆ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರÀ ಕುಟುಂಬದವರು ಆಕ್ರಮಿಸಿಕೊಂಡಿದ್ದರು. ಸಂಘಟನೆಯ ನಿರಂತರ ಹೋರಾಟದ -Àಲವಾಗಿ ಸ್ಪಂದಿಸಿದ ತಾಲೂಕು ಕಚೇರಿ ಆಽಕಾರಿಗಳು ಅಕ್ರಮಿಸಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದರು. ಆದರೆ ಇತ್ತೀಚೆಗೆ ಮೂರು ಸದಸ್ಯರು ತಮ್ಮ ಕುಟುಂಬದವರ ಹೆಸರಿನಲ್ಲಿ ರಾಜಕೀಯ ಪ್ರಭಾವ ಬಳಸಿ ಭ್ರಷ್ಟ ಪಂಚಾಯತಿ ಅಭಿವೃದ್ದಿ ಅಽಕಾರಿ ಮೂಲಕ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದು ದಾಖಲೆ ಸಮೇತ ಸಾಬೀತಾಗಿದೆ ಎಂದು ಹೇಳಿದರು. ನಿವೇಶನದ ಜಾಗವನ್ನು ಬಡಕುಟುಂಬಗಳಿಗೆ ಹಂಚಿಕೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಸತ್ಯನಾರಾಯಣ ರಾವ್, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಟಿ.ಪ್ರಸನ್ನ, ಡಿಎಸ್‌ಎಸ್ ಸಂಯೋಜಕ ಬಿ.ರವಿನಾಯಕ್, ಜೀವಕುಮಾರ್, ಶೇಖರಪ್ಪ, ವಾಸುದೇವ್, ಕುಮಾರ್, ಗಿರೀಶ್, ರಮೇಶ್, ನಾಗರಾಜ್ ಇತರರಿದ್ದರು.