ಭದ್ರಾವತಿ: ಕರ್ನಾಟಕ ಬಂದ್‌ಗೆ ತಾಲೂಕು ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘ ಬೆಂಬಲ ಸೂಚಿಸಿದವು. ಬೆಳಗ್ಗೆ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಕೀಲರು ಕೋರ್ಟ್ ಆವರಣದಿಂದ ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ ಹಾಗೂ ಕಾವೇರಿ ಪ್ರಾಽಕಾರದ ಆದೇಶವನ್ನು ಽಕ್ಕರಿಸಿದರು. ನಂತರ ತಾಲೂಕು ಕಚೇರಿವರೆಗೂ ತೆರಳಿ ತಾಲೂಕು ದಂಡಾಽಕಾರಿಗಳಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ, ಕಾರ್ಯದರ್ಶಿ ಉದಯಕುಮಾರ್, ಡಿ.ಎಂ.ವಿಶ್ವನಾಥ್. ಟಿ.ಚಂದ್ರೇಗೌಡ, ವಿಶ್ವನಾಥ್, ತಮ್ಮೇಗೌಡ, ಮಗೇಶ್‌ಬಾಬು, ಲೋಕೇಶ್, ಮಂಜುನಾಥ್, ಸುಽÃಂದ್ರ, ವಿದ್ಯಾಬೇಕಲ್, ಆಶಾ, ರೇಖಾ, ವನಿತಾ ಇತರರಿದ್ದರು.
ಕರ್ನಾಟಕ ಬಂದ್‌ಗೆ ಉಕ್ಕಿನ ನಗರಿ ಭದ್ರಾವತಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ದಿನಸಿ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ಆದರೆ ಶೇ.75 ವ್ಯಾಪಾರಿಗಳು ವಹಿವಾಟು ನಡೆಸಿದರು. ಬಸ್ ಸಂಚಾರ, ಆಟೋ ರಿಕ್ಷಾ ಎಂದಿನAತೆ ಇತ್ತು. ಶಾಲಾ-ಕಾಲೇಜುಗಳು ತೆರೆದಿದ್ದವು.
ಸರ್ಕಾರಗಳು ಬೆಂಗಳೂರಿನ ಜನರಿಗೆ ಕುಡಿಯುವ ನೀರು ಕಾಯ್ದಿರಿಸುವಲ್ಲಿ ಹಾಗೂ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ತಮಿಳುನಾಡಿಗೆ ನೀರು ಬಿಡುವ ಸರ್ಕಾರದ ತೀರ್ಮಾನ ಖಂಡನೀಯ ಎಂದು ಆಗ್ರಹಿಸಿದ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಪದಾಽಕಾರಿಗಳು ಜಿಲ್ಲಾಽಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.