ಧಾರವಾಡ: ನಗರದ ಶ್ರೀ ಸತ್ಯಸಾಯಿ ವಿದ್ಯಾ ಮಂದಿರದ ೮ನೇ ತರಗತಿಯ ವಿದ್ಯಾರ್ಥಿನಿ ದಿಶಾ ಪಾಟೀಲ 14 ವರ್ಷದೊಳಗಿನ ಬಾಲಕಿಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ 9.23 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನ ಪಡೆದು ನ. 5ರಿಂದ 7ರವರೆಗೆ ಛತ್ತೀಸಗಢದ ರಾಯಪುರದಲ್ಲಿ ನಡೆಯಲಿರುವ ಸಿಬಿಎಸ್‌ಇ ರಾಷ್ಟ್ರೀಯ ಕೂಟಕ್ಕೆ ಅರ್ಹತೆ ಪಡೆದಿದ್ದಾಳೆ. ಇತ್ತೀಚೆಗೆ ದಾವಣಗೆರೆಯ ಪಿಎಸ್‌ಎಸ್‌ಇಎಂಆರ್ ಸ್ಕೂಲ್‌ನಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ದಿಶಾ ಈ ಸಾಧನೆ ಮಾಡಿದ್ದಾಳೆ.