ಜಿಲ್ಲೆ

ಶುಚಿತ್ವದಿಂದ ಕಾಯಿಲೆಗಳ ನಿಯಂತ್ರಣ ಸಾಧ್ಯ

Davangere - Desk - Mahesh Babu E

ಚಿತ್ರದುರ್ಗ: ಕೈಗಳ ಶುಚಿತ್ವ, ಬಿಸಿ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಪರಿಸರದಿಂದ ವಾಂತಿ-ಭೇದಿ ಮತ್ತಿತರ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಿಕ್ಷಕರು, ಅಂಗನವಾಡಿ ಕಾರ‌್ಯಕರ್ತೆಯರಿಗೆ ಸ್ವಚ್ಛತೆ ಕುರಿತಂತೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಕಾಯಿಲೆಗಳ ನಿಯಂತ್ರಣಕ್ಕೆ ಪರಿಸರದ ಸ್ವಚ್ಛತೆ ಮುಖ್ಯ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ರಂಗಾರೆಡ್ಡಿ, ಮುಖ್ಯಶಿಕ್ಷಕ ಟಿ.ರುದ್ರಪ್ಪ ಮತ್ತಿತರರು ಇದ್ದರು.