ಜಿಲ್ಲೆ

ನಿತ್ಯ ಧ್ಯಾನದಿಂದ ರೋಗಗಳು ದೂರ

Dharwad

ಹುಬ್ಬಳ್ಳಿ: ಮಾನಸಿಕ ನೆಮ್ಮದಿ, ಸಮಯದ ಸದ್ಬಳಕೆಗಾಗಿ ಧ್ಯಾನ ಮಾಡುವುದು ಅಗತ್ಯ ಎಂದು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್​ವೆುಂಟ್​ನ ಬ್ರರ್ಹ ಸುಭಾಷ ಪತ್ರಿ ಹೇಳಿದರು.

ನಗರದ ನೃಪತುಂಗ ಬೆಟ್ಟದ ಬಳಿಯ ಪಿರಮಿಡ್ ಧ್ಯಾನ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಧ್ಯಾನ-ಸತ್ಸಂಗ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಧ್ಯಾನ ಮಾಡುವುದರಿಂದ ರೋಗಗಳು ದೂರವಾಗುತ್ತವೆ ಎಂದರು.

ಪ್ರತಿಯೊಬ್ಬರೂ ಧ್ಯಾನ ಮಾಡುವುದನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು. ನಿತ್ಯ ಅರ್ಧ ಗಂಟೆಯಾದರೂ ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು.

ಪಿರಮಿಡ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಧ್ಯಾನ ಮತ್ತು ಯೋಗ ಮಾಡುವ ಮೂಲಕ ಆರೋಗ್ಯ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಧ್ಯಾನ ಶಿಕ್ಷಕಿ ವಿಶಾಲಾಕ್ಷಿ ಆಕಳವಾಡಿ, ಪ್ರಮುಖರಾದ ನೀಲಕಂಠ ಆಕಳವಾಡಿ, ವಿಜಯಕುಮಾರ ಶೆಟ್ಟರ್, ಬಸವರಾಜ ಹೊಸಮನಿ, ಎಸ್.ಎಂ. ಪಟ್ಟಣಶೆಟ್ಟಿ, ಚನ್ನು ಹೊಸಮನಿ, ಜೀವನ ವಸ್ತ್ರದ, ವಿ. ಈಶ್ವರ, ಲಲಿತಾ ಶಾ ಇತರರಿದ್ದರು.