ಮಾನ್ವಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.ಶರಣಬಸವ ಪಾಟೀಲ್ ಮಾತನಾಡಿದರು. ಮನೋರೋಗ ತಜ್ಞ ಡಾ.ಮನೋಹರ್ ಪತ್ತಾರ್ ಇತರರಿದ್ದರು. 
ಜಿಲ್ಲೆ

ಕಾಯಿಲೆ ಲಕ್ಷಣಗಳಿದ್ದರೆ ಚಿಕಿತ್ಸೆ ಪಡೆಯಿರಿ

Kopala - Desk - Eraveni

ಮಾನ್ವಿ: ಕ್ಷಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿಯೇ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕು ಎಂದು ಟಿಎಚ್‌ಒ ಶರಣಬಸವ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ವಾರಕಿಂತ ಹೆಚ್ಚು ದಿನ ಕೆಮ್ಮು, ಕಫದಲ್ಲಿ ರಕ್ತ ಬರುವುದು, ಹಸಿವಿಲ್ಲದೆ ಇರುವುದು, ದೇಹದ ತೂಕದಲ್ಲಿ ವ್ಯತ್ಯಾಸ, ರಾತ್ರಿ ವೇಳೆ ಬೆವರುವುದು ಹಾಗೂ ಅತಿಯಾದ ಜ್ವರ ಕ್ಷಯರೋಗದ ಪ್ರಮುಖ ಲಕ್ಷಣಗಳಾಗಿವೆ.

ಇಂಥ ಲಕ್ಷಣಗಳು ಕಾಣಿಸಿದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಮನೋರೋಗ ತಜ್ಞ ಡಾ.ಮನೋಹರ್ ಪತ್ತಾರ್, ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗದ ವೈದ್ಯಾಧಿಕಾರಿ ಚಂದ್ರಶೇಖರ್ ಪಾಟೀಲ್, ಆರೋಗ್ಯ ಶಿಕ್ಷಣಾಧಿಕಾರಿ ಬಾಬು ಚಿನ್ನು, ಕ್ಷಯರೋಗ ಘಟಕದ ಮೇಲ್ವಿಚಾರಕ ಶಿವರಾಜ, ಪ್ರಮುಖರಾದ ಬಾಲಪ್ಪ ನಾಯಕ, ಗುರುರಾಜ ಕುಲಕರ್ಣಿ, ದೀಪಾ, ಪ್ರೇಮ ಪ್ರಸಾದ, ನವೀನ್ ಕುಮಾರ್ ಇತರರಿದ್ದರು.