ಜಿಲ್ಲೆ

ಪಾಲಿಕೆ ಸಭೆಯಲ್ಲಿ ಗಂಡದಿರಿಗೆ ಸೀಟ್​ ಕೊಡಿ

ಕಲಬುರಗಿ: ಮಹಾನಗರ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯೆಯರ ಪತಿಯಂದಿರಿಗೆ, ಕುಟುಂಬದವರಿಗೆ ವೀಕ್ಷಕರ ಗ್ಯಾಲರಿಯಲ್ಲಿ ಕೂಡಲು ಅವಕಾಶ ನೀಡುವ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು.

ಸಭೆಗೆ ಮುನ್ನವೇ ಒಳ ಪ್ರವೇಶಿಸಿದ್ದ ಜೆಡಿಎಸ್​ ಮುಖಂಡ ಕೃಷ್ಣಾ ರಡ್ಡಿ ಮೇಯರ್​ ಗೆ ಮನವಿ ಮಾಡಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ಪ್ರತಿ ಪಕ್ಷ ನಾಯಕ ಅಜ್ಮಲ್​ ಗೋಲಾ ಸಭೆಯ ಘನತೆ ಇರಲಿ. ಹೊರಗಿನವರಿಗೆ ಪ್ರತಿಕ್ರಿಯಿಸಬೇಕಿಲ್ಲ. ನಮಗೆ ಉತ್ತರ ನೀಡಿ ಎಂದರು.

ಕಳೆದ ಬಾರಿ ಸಭೆಯಲ್ಲಿ ಸದಸ್ಯೆಯರ ಪತಿಯಂದಿರು ಚರ್ಚೆ ಮಧ್ಯೆ ಪ್ರವೇಶಿಸಿದ್ದು, ಪ್ರತಿ ಪಕ್ಷ ನಾಯಕ ಕೃಷ್ಣಾ ನಾಯಕ್​ಗೆ ನಿಂದಿಸಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಆದ್ದರಿಂದ ಮೇಯರ್ ವಿಶಾಲ ದರ್ಗಿ ಸಭೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದರು. ಇದರ ಮಧ್ಯೆ ಅವಕಾಶ ನೀಡುವಂತೆ ಸದಸ್ಯ ಸಚಿನ ಕಡಗಂಚಿ ಮನವಿ ಮಾಡಿದರು. ಇತರ ಮಹಿಳಾ ಸದಸ್ಯರೂ ಸಚಿನ್​ ಮಾತಿಗೆ ಸಾಥ್​ ನೀಡಿ ಎಂದು ಮನವಿ ಮಾಡಿದರು. ಎಲ್ಲರ ಮನವಿ ಮೇರೆಗೆ ಸದಸ್ಯೆಯರ ಕುಟುಂಬದವರಿಗೆ ಮಾತ್ರ ಅವಕಾಶ ನೀಡಿ ಮೇಯರ್ ವಿಶಾಲ ದರ್ಗಿ ಆದೇಶಿಸಿದರು.

ಇದರ ಮಧ್ಯೆ ಕುಟುಂಬದವರು ಹೊರತುಪಡಿಸಿ, ವೀಕ್ಷಕರ ಗ್ಯಾಲರಿಯನ್ನು ಪ್ರವೇಶಿಸಿದವರನ್ನು ಹೊರಗೆ ಕಳುಹಿಸಲಾಯಿತು.