ಜಿಲ್ಲೆ

ಮನಕ್​ ಮಂಥನ್​ನಲ್ಲಿ ತಜ್ಞರಿಂದ ವಿಚಾರ ಮಂಡನೆ

ಹರೀಶ್​​ ಕೆ.ಸಿ.

ಬೆಂಗಳೂರು: ಭಾರತೀಯ ಮಾನಕ ಬ್ಯುರೋ (ಬಿಐಎಸ್​) ನಗರದಲ್ಲಿ ಆಯೋಜಿಸಲಾಗಿದ್ದ "ಮನಕ್​ ಮಂಥನ' ಸಮಾರಂಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಉಪಕರಣಗಳ ಉತ್ಪಾದನಾ ಕೈಗಾರಿಕೆಗಳು, ಉದ್ಯಮ ಸಂಘಗಳು, ಪ್ರಯೋಗಾಲಯಗಳು, ಗ್ರಾಹಕ ಸಂಘಗಳು ಸೇರಿ ವಿವಿಧ ವಲಯಗಳ ಪಾಲುದಾರರನ್ನು ಒಟ್ಟುಗೂಡಿಸಿತ್ತು. ಸಂಭಾವ್ಯ ಸವಾಲುಗಳು ಕುರಿತು ವಿವಿಧ ತಜ್ಞರು ವಿಚಾರ ಮಂಡಿಸಿದರು.

ಸಾರ್ವಜನಿಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಬಿಐಎಸ್​ ಕಾಯೋರ್ನ್ಮುಖವಾಗಿದೆ. ಆಹಾರ ಸುರಕ್ಷತೆ ಬಗ್ಗೆ ಜನರಿಗೆ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ಬಿಐಎಸ್​ ಪರವಾನಗಿ ಪಡೆದು ತಯಾರಿಸುವ, ಪ್ಯಾಕಿಂಗ್​ ಮೇಲೆ ಐಎಸ್​ಐ ಗುರುತು ಇರುವ ಉತ್ಪನ್ನಗಳನ್ನು ಖರೀದಿಸಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಣೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡಬೇಕು. ರಾಸಾಯನಿಕ ಮತ್ತು ಕಲಬೆರಕೆ ವಸ್ತುಗಳ ಖರೀದಿಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಬಿಐಎಸ್​ ಬೆಂಗಳೂರು ಘಟಕ ನಿರ್ದೇಶಕ ವಿಜಯವೀರನ್​ ಹೇಳಿದರು.

ಕರ್ನಾಟಕ ಎಲೆಕ್ಟ್ರಾನಿಕ್ಸ್​ ಇಂಡಸ್ಟ್ರೀಸ್​ ಒಕ್ಕೂಟದ ಅಧ್ಯಕ್ಷ ಮಾಧವ್​ ಬಡಶೇಷಿ, ರೆಫ್ರಿಜರೇಟರ್​, ತೊಳೆಯುವ ಯಂತ್ರಗಳು ಮತ್ತು ಒವನ್​ ಸೇರಿ ದೇಶೀಯ ವಿದ್ಯುತ್​ ಉಪಕರಣದ ಸುರಕ್ಷತೆ ಬಗ್ಗೆ ತಿಳಿಸಿದರು. ವಿಶ್ವೇಶ್ವರಯ್ಯ ಕಾಲೇಜು ಆ್​ ಇಂಜಿನಿಯರಿಂಗ್​ನ ಪ್ರಾಧ್ಯಾಪಕ ಉಮೇಶ್​, ಬಿಐಎಸ್​ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಬಿಐಎಸ್​ ವಿಜ್ಞಾನಿ ವಿನೋಧಿನಿ ಕಿಶೋರ್​ ಇತರರಿದ್ದರು.