ಜಿಲ್ಲೆ

ಪಿಡಿಎಲ್​ ಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ತಾರತಮ್ಯ

ಚನ್ನಪಟ್ಟಣ: ಈ ಹಿಂದಿನ ಒಪ್ಪಂದದಂತೆ ಪಿಎಲ್​ಡಿ ಬ್ಯಾಂಕ್​ ಅಧ್ಯ ಸ್ಥಾನಕ್ಕೆ ಗೋವಿಂದನಹಳ್ಳಿ ನಾಗರಾಜು ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಾಡಲಾಗುವುದು ಎಂದು ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ಡಿ.ಎಂ.ಕೆ.ಕುಮಾರ್​ ಎಚ್ಚರಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷದಿಂದ ಬ್ಯಾಂಕ್​ನಲ್ಲಿ ಸಾಕಷ್ಟು ಗೊಂದಲ ಮುಂದುವರಿದಿದೆ. ಹಾಲಿ ಅಧ್ಯರು ಈಗಾಗಲೇ ಒಪ್ಪಂದದಂತೆ ರಾಜೀನಾಮೆ ನೀಡಬೇಕಿತ್ತು. ಆದರೆ, ಮಾತಿಗೆ ತಪ್ಪಿದ್ದಾರೆ. ಏಳು ಜೆಡಿಎಸ್​ ಬೆಂಬಲಿತ ನಿರ್ದೇಶಕರು ಒಟ್ಟಾಗಿದ್ದೇವೆ. ಅನ್ಯಾಯವಾಗಿದ್ದರೂ, ಬೇರೆಯವರ ಜತೆ ಕೈ ಜೋಡಿಸದೆ ಪ ನಿಷ್ಠರಾಗಿದ್ದೇವೆ. ಚುನಾವಣೆ ನಂತರ ಐದು ಮಂದಿಗೆ ಅಧ್ಯ ಸ್ಥಾನ ಹಾಗೂ ಐದು ಮಂದಿ ಉಪಾಧ್ಯರಂತೆ ಅಧಿಕಾರ ಹಂಚಿಕೆಯಾಗಿತ್ತು. ಆದರೆ, ಈ ಒಪ್ಪಂದದಂತೆ ಯಾವುದೂ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರಿಷ್ಠರ ಸೂಚನೆ ಮೇರೆಗೆ ಮೊದಲ ಅವಧಿಗೆ ನಾಗರಾಜು ಅವರಿಗೆ ಒಂದು ವರ್ಷದ ಮಟ್ಟಿಗೆ ಅಧಿಕಾರ ನೀಡಲಾಗಿತ್ತು. ಹಿಂದೆ ಅವರು ನಾಲ್ಕು ವರ್ಷ ಅಧಿಕಾರ ಅನುಭವಿಸಿದ್ದಾರೆ. ನಿಖಿಲ್​ ಕುಮಾರಸ್ವಾಮಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರೂ ನೀಡಿಲ್ಲ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಪಕ್ಷದ ನಾಯಕರು ಶ್ರೀವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಹಕಾರ ಇರುವುದಿಲ್ಲ. ನಾವು ಅವಿಶ್ವಾಸ ತರುವ ಮುನ್ನ ನಾಗರಾಜು ಅವರೇ ರಾಜೀನಾಮೆ ನೀಡಬೇಕು ಎಂದರು.

ಬ್ಯಾಂಕ್​ ನಿರ್ದೇಶಕ ಮಾಗನೂರು ಗಂಗರಾಜು ಮಾತನಾಡಿ, ಅಧಿಕಾರ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ತಾಲೂಕಿನಲ್ಲಿ ಜೆಡಿಎಸ್​ ಅಧೋಗತಿಗೆ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್​ ಮುಖಂಡರಾದ ಇ.ತಿ.ಶ್ರೀನಿವಾಸ್​, ಎವಿ ಹಳ್ಳಿ ವೆಂಕಟೇಶ್​, ಎಪಿಎಂಸಿ ಸಿದ್ದಪ್ಪ, ಎಲೆಕೇರಿ ನಂದೀಶ್​, ಇಗ್ಗಲೂರು ಸೋಮಶೇಖರ್​, ಅಕ್ಕೂರು ಚಿನ್ನಗಿರಿ, ಎಸ್​.ವಿ.ಟಿ. ವೆಂಕಟೇಶ್​, ರೇಖಾ ಉಮಾಶಂಕರ್​ ಇದ್ದರು.

ಜೆಡಿಎಸ್​ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟ!!!

ಚನ್ನಪಟ್ಟಣದ ಜೆಡಿಎಸ್​ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅದು ಸಹಕಾರಿ ೇತ್ರದಲ್ಲಿ ಎಂಬುದು ವಿಶೇಷ.

ಚನ್ನಪಟ್ಟಣ ೇತ್ರದ ಜೆಡಿಎಸ್​ ಹಾಗೂ ಭಿನ್ನಮತೀಯ ಚಟುವಟಿಕೆಗೂ ಬಿಡಲಾರದ ನಂಟಿದೆ ಎಂದರೆ ತಪ್ಪಾಗಲಾರದು. ಮಾಜಿ ಸಚಿವ ದಿ. ಎಂ.ವರದೇಗೌಡರ ಕಾಲದಿಂದಲೂ ಇದು ನಡೆದುಕೊಂಡೇ ಬಂದಿರುವ ಇತಿಹಾಸವಿದೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ೇತ್ರಕ್ಕೆ ಕಾಲಿಟ್ಟ ಬಳಿಕ ತಾಲೂಕಿನಲ್ಲಿ ಬಣ ರಾಜಕೀಯ ಅಲ್ಪಮಟ್ಟಿಗೆ ಣಿಸಿತ್ತು. ಎಚ್​.ಡಿ.ಕೆ. ೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೇಂದ್ರದತ್ತ ತೆರಳಿದ ಬಳಿಕ, ಪದಲ್ಲಿ ಬಣರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ.