ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆಯಾಗಿದೆ. ಉರಗ ಪ್ರೇಮಿ ಸ್ನೇಕ್ ಕಿರಣ್ ಹಾವನ್ನು ರಕ್ಷಿಸಿದ್ದು, ವಲಯ ಅರಣ್ಯಾಧಿಕಾರಿ ಶ್ರೀಧರ್ ನಿರ್ದೇಶನದಂತೆ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಿದ್ದಾರೆ.
ಚರ್ಮದ ವರ್ಣದ್ರವ್ಯದ ಕೊರತೆಯಿಂದ ಹುಟ್ಟುವ ಈ ಜೀವಿಗಳಿಗೆ ಆಲ್ಬಿನೋ ಎಂದು ಕರೆಯಲಾಗುವುದು. ಸಾಮಾನ್ಯವಾಗಿ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಉಳಿದ ಹಾವುಗಳು ಬಣ್ಣದ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಎನ್ನುತ್ತಾರೆ ಕಿರಣ್.