ಜಿಲ್ಲೆ

ರಾಜ್ಯೋತ್ಸವ ಪ್ರಯುಕ್ತ ಕನ್ನಡ ಪುಸ್ತಕಗಳಿಗೆ ರಿಯಾಯಿತಿ: ಸಪ್ನ ಬುಕ್​ ಹೌಸ್​ನಿಂದ 'ಪುಸ್ತಕ ಜಾತ್ರೆ'

ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್​ ಹೌಸ್​ ವತಿಯಿಂದ ಗಾಂಧಿನಗರದ ಮಳಿಗೆಯಲ್ಲಿ ನ.1ರಂದು ಬೆಳಗ್ಗೆ 10 ಗಂಟೆಗೆ "ಪುಸ್ತಕ ಜಾತ್ರೆ'' ಆಯೋಜಿಸಲಾಗಿದೆ.

ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ ಚಾಲನೆ ನೀಡಲಿದ್ದಾರೆ. ನಟಿ ಸಪ್ತಮಿ ಗೌಡ ದೀಪ ಬೆಳಗಿಸಲಿದ್ದು, ಗಾಯಕಿ ಚಿನ್ಮಯಿ ಚಂದ್ರಶೇಖರ್​ ಹಾಡು ಹಾಡಲಿದ್ದಾರೆ. ಸಾಹಿತಿಗಳಾದ ಡಾ. ಹಂ.ಪ. ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ದೊಡ್ಡರಂಗೇಗೌಡ, ಡಾ. ಎಚ್​.ಎಸ್​. ವೆಂಕಟೇಶ ಮೂರ್ತಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​, ಪ್ರೊ. ಎಸ್​.ಜಿ. ಸಿದ್ದರಾಮಯ್ಯ, ಬಿ.ಆರ್​. ಲಕ್ಷ್ಮಣ್​ರಾವ್​, ಪ್ರತಿಭಾ ನಂದಕುಮಾರ್​ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಪುಸ್ತಕಗಳಿಗೆ ರಿಯಾಯಿತಿ: ಸಪ್ನ ಬುಕ್​ ಹೌಸ್​ನಿಂದ ರಾಜ್ಯೋತ್ಸವ ಪ್ರಯುಕ್ತ ನ.1ರಿಂದ 31ರವರೆಗೆ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. ಕನ್ನಡ ಪುಸ್ತಕಗಳಿಗೆ ಶೇ.10 ರಿಂದ 25 ರಿಯಾಯಿತಿ ಪ್ರಕಟಿಸಿದೆ. 300 ರೂ. ಮೇಲ್ಪಟ್ಟ ಕನ್ನಡ ಪುಸ್ತಕಗಳ ನಿವ್ವಳ ಖರೀದಿಗೆ ವರ್ಷಪೂರ್ತಿ ಶೇ.10 ರಿಯಾಯಿತಿ ಹೊಂದಿರುವ ಸದಸ್ಯತ್ವ ಕಾರ್ಡ್​ ದೊರೆಯಲಿದೆ.