ಜಿಲ್ಲೆ

ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯವಸ್ಥಿತವಾದ ಹಣಕಾಸಿನ ಯೋಜನೆಯಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಘಟಕ ವತಿಯಿಂದ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಣಕಾಸು ಸಾಕ್ಷರತೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬದುಕಿಗೆ ಬೇಕಾಗುವಷ್ಟು ಹಣ ಸಂಪಾದನೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲಿ ಇದೆ. ಹಣಕಾಸು ನಿರ್ವಹಣೆಯಲ್ಲಿ ಸ್ವಯಂ ಶಿಸ್ತು ಇರಬೇಕು. ಮನುಷ್ಯ ಎಂದಿಗೂ ಹಣದ ಹಿಂದೆ ಹೋಗಬಾರದು. ಬದಲಿಗೆ ಹಣವೇ ಮನುಷ್ಯನನ್ನು ಹುಡುಕಿಕೊಂಡು ಬರುವಂತಹ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಶ್ರೀಧರ ಕುಬಸದ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ಹಣದ ಉಳಿತಾಯವು ಭವಿಷ್ಯದ ಏಳಿಗೆಗೆ ಕಾರಣವಾಗುತ್ತದೆ. ಹಣಕಾಸು ನಿರ್ವಹಣೆಯ ಕುರಿತು ಇಂದಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಅರಿಯುವುದು ಬಹಳ ಅಗತ್ಯ. ಹುಟ್ಟಿನಿಂದ ಸಾವಿನವರೆಗೂ ಹಣ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ. ಇದು ಮನುಷ್ಯನ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಉತ್ತಮ ಜೀವನ ನಿರ್ವಹಣೆಗಾಗಿ ಹಣಕಾಸಿನ ನಿರ್ವಹಣೆ ಕಲಿತು ಅಳವಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಸುರಕ್ಷತೆ ಹೆಚ್ಚಿಸಿಕೊಳ್ಳಬಹುದು ಎಂದರು.
ಪ್ರೊ. ಎಂ. ಕೆ. ವಿ. ಲಮಾಣಿ ಮಾತನಾಡಿದರು.
ಕರ್ನಾಟಕ ಕಾಲೇಜಿನ ವಾಣಿಜ್ಯ ವಿಭಾಗದ ಸಮನ್ವಯಾಽಕಾರಿ ಡಾ. ಬಿ. ಬಿ. ಬಿರಾದಾರ, ಡಾ. ಐ. ಸಿ. ಮುಳಗುಂದ, ಡಾ. ಇಂದ್ರಾಣಿ ಕಟ್ಟಿ, ಡಾ. ಶಿಲ್ಪಾ ಧಾರವಾಡ, ಪ್ರೊ.ಸದಾಶಿವ ಮೆಣಸಿನಕಾಯಿ, ಸದಾಶಿವ ಅರಕೇರಿ, ವಿಲಾಸ ದೊಡಮನಿ, ವಿದ್ಯಾರ್ಥಿಗಳು. ಇತರರು ಇದ್ದರು.