ಜಿಲ್ಲೆ

ಸೈನಿಕ ವೃತ್ತಿಯಿಂದ ಯುವಕರಲ್ಲಿ ಶಿಸ್ತು: ಅಪ್ಪಯ್ಯ ಮಣಿಯಾಣಿ ಅಭಿಮತ

ಪೆರ್ಲ: ಇಂದಿನ ಯುವಜನತೆ ಸೈನಿಕರಾಗಿ ದೇಶ ಸೇವೆ ಮಾಡುವಲ್ಲಿ ಆಸಕ್ತಿಯುಳ್ಳವರಾಗಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಪ್ರವರ್ತಿಸುವ ಎನ್.ಸಿ.ಸಿ ಘಟಕಗಳು ಇದ್ದಕ್ಕೆ ಪ್ರದಾನ ಪಾತ್ರವಹಿಸುತ್ತದೆ. ಸೈನಿಕ ವೃತ್ತಿ ಯುವಕರಿಗೆ ಶಿಸ್ತು ಕಲಿಸುತ್ತದೆ. ದೇಶಕ್ಕಾಗಿ ಸೇವೆ ಮಾಡಲು ಸಿಗುವ ಭಾಗ್ಯ ಎಲ್ಲರಿಗೂ ಲಭಿಸುವಂತದಲ್ಲ ಎಂದು ಪಾರಾ ಮಿಲಿಟರಿ ಪೋರ್ಸ್‌ನ ನಿವೃತ್ತ ಸೈನಿಕ ಅಪ್ಪಯ್ಯ ಮಣಿಯಾಣಿ ಕಾಟುಕುಕ್ಕೆ ಹೇಳಿದರು.

ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಎನ್‌ಸಿಸಿ ಘಟಕ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆಯಲ್ಲಿ ಮಾತನಾಡಿದರು.

ಅಪ್ಪಯ್ಯ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಸಮಾಜ ಶಾಸ್ತ್ರ ಅಧ್ಯಾಪಕ ರಾಜೇಶ್ ಸಿ.ಎಚ್., ಶ್ರೀವಿದ್ಯಾ ವೇಣುಗೋಪಾಲ್, ರಾಜ್ಯಶಾಸ್ತ್ರ ಅಧ್ಯಾಪಕಿ ರಮಣಿ ಎಂ.ಎಸ್., ಅರ್ಥಶಾಸ್ತ್ರ ಅಧ್ಯಾಪಕಿ ವಾಣಿ ಕೆ., ಇಂಗ್ಲಿಷ್ ಅಧ್ಯಾಪಕಿ ವಾಣಿಶ್ರೀ, ಇತಿಹಾಸ ಅಧ್ಯಾಪಕರಾದ ಕೃಷ್ಣ ಕುಮಾರಿ, ಮಹೇಶ್ ಏತಡ್ಕ , ಕನ್ನಡ ಅಧ್ಯಾಪಕಿ ಸುಶ್ಮಿತಾ ಶೆಟ್ಟಿ, ಸಂಸ್ಕೃತ ಅಧ್ಯಾಪಕ ಅಪ್ಪು ಕೃಷ್ಣನ್ ಉಪಸ್ಥಿತರಿದ್ದರು.
ಎನ್‌ಸಿಸಿ ಹಳೇ ವಿದ್ಯಾರ್ಥಿನಿ ತನುಜಾ ಬಿ., ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಈಶ್ವರ ನಾಯಕ್ ಕೆ.ಸ್ವಾಗತಿಸಿ, ಸ್ವರ್ಣ ಲಕ್ಷ್ಮಿ ವಂದಿಸಿ. ಶಿವಾನಿ ನಿರೂಪಿಸಿದರು.