ಜಿಲ್ಲೆ

ಸಮರ್ಪಕ ಮಾಹಿತಿ ನೀಡದಿದ್ದರೆ ಶಿಸ್ತುಕ್ರಮ

ಸೋಮನಾಥ ರೆಡ್ಡಿ

ನವಲಗುಂದ: ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅರ್ಧಮರ್ಧ ವರದಿ ನೀಡಿದರೆ ಅಂತಹ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ಸೋಮವಾರ ಕರೆಯಲಾದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಸಮರ್ಪಕ ಮಾಹಿತಿ ನೀಡಿದ ಪಂಚಾಯತ್ ರಾಜ್ ಉಪವಿಭಾಗ ಅಧಿಕಾರಿ ಮದನಕುಮಾರ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡರು. ಒಂದು ಗಂಟೆಯಲ್ಲಿ ಸಂರ್ಪೂಣ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಒಂದು ತಿಂಗಳಿಂದ ತಡಹಾಳ, ಅರಹಟ್ಟಿ, ಕೊಂಗವಾಡ ಗ್ರಾಮದ ಹೊಲಗಳಿಗೆ ವಿದ್ಯುತ್ ಸಮಸ್ಯೆಯಾಗುತ್ತಿದ್ದು. ಆ ಭಾಗದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಹೆಸ್ಕಾಂ ಅಧಿಕಾರಿ ಪ್ರೀತಿ ಕೆ. ಅವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅವರು, ‘ಸತವಾಗಿ ಮಳೆ ಸುರಿಯುತ್ತಿರುವುದರಿಂದ ಕಂಬಗಳು ಬಿದ್ದಿವೆ. ಒಂದು ವಾರದಲ್ಲಿ ಸರಿ ಮಾಡಿಸಲಾಗುತ್ತದೆ’ಎಂದರು. ಎರಡು ದಿಗಳಲ್ಲಿ ಸಮಸ್ಯೆ ಸರಿಪಡಿಸುವಂತೆ ಶಾಸಕರು ಸೂಚಿಸಿದರು.

ವಿಧಾನ ಸಭಾ ಕ್ಷೇತ್ರದಲ್ಲಿ ಹೃದಯಾಘಾತದಿಂದ ಸಾವಿಗೀಡುಗಾತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು. ಈ ಕುರಿತು ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಟಿಎಚ್.ಒ ಕರ್ಲಾವಾಡ ಅವರನ್ನು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಕರ್ಲವಾಡ, ‘ಹೃದಯಾಘಾತದಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು. ಇಂದಿನ ಜೀವನ ಶೈಲಿಯಲ್ಲಿ ಒತ್ತಡ ಹಾಗೂ ದುಶ್ಚಟಗಳಿಂದ ಹೃದಯಘಾತವಾಗುತ್ತಿದೆ. ಅಲ್ಲದೆ, ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಾಗ ಮಾತ್ರ ಇಂತಹ ಹೃದಯಘಾತದಿಂದ ಉಳಿಯಬಹುದು’ ಎಂದು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ತಿಪ್ಪೆಸ್ವಾಮಿ ಮಾತನಾಡಿ, ವಿಧಾನ ಸಭಾ ಕ್ಷೇತ್ರದ ಮೊರಬ ಹೋಬಳಿಯಲ್ಲಿ ವಾಡಿಕೆಗಿಂತ ಶೆ. 55 ರಷ್ಟು ಮಳೆ ಹೆಚ್ಚಾಗಿದ್ದು. ಬೆಳೆ ನಷ್ಟು ಕುರಿತು ಇನ್ನೂ ಸಮಿಕ್ಷೆ ನಡೆಯುತ್ತಿದ್ದು ಶೀಘ್ರವಾಗಿ ವರಧಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಜಿಲ್ಲಾಧಿಕಾರಿಗಳ ಅದೇಶದ ಮೇರಿಗೆ ತೋಟಗಾರಿಗೆ ಹಾಗೂ ಕಂದಾಯ ಇಲಖೆ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ತಯಾರುತ್ತಿದ್ದೇವೆ ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ ಎಂದು ಶಾಸಕರು ಸಭೆಯಲ್ಲಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಮಲ್ಲಾಡ, ಪುರಸಭೆ ಮುಖ್ಯಾಧಿಕಾರಿ ಶುರಣು ಪೂಜಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಕುರಿತು ಪ್ರಗತಿ ವಿವರಿಸಿದರು. ತಹಸೀಲ್ದಾರ್ ಸುಧೀರ ಸಾವಕಾರ, ಸಿಪಿಐ ರವಿ ಕಪ್ಪತ್ತನವರ, ನವಲಗುಂದ ತಾಪಂ ಇಒ ಭಾಗ್ಯಶ್ರೀ ಜಾಗಿರದಾರ, ಅಣ್ಣಿಗೇರಿ ತಾಪಂ ಇಒ ಪಿ.ಆರ್. ಬಡೆಖಾನ, ತಾಪಂ ನಾಮನಿರ್ದೇಶಿತ ಸದ್ಯಸರಾದ ಶಿರಾಜ ಧಾರವಾಡ, ನಂದಿನ ಹಾದಿಮನಿ ಇತರಿದ್ದರು.