ಜಿಲ್ಲೆ

ವಿದ್ಯಾರ್ಥಿಗಳೇ ದುಶ್ಚಟದಿಂದ ದೂರವಿರಿ

ಸೋಮಲಿಂಗ ತಳವಾರ

ಚನ್ನಮ್ಮನ ಕಿತ್ತೂರು: ಆತ್ಮವಿಶ್ವಾಸದಿಂದ ಮುಂದುವರಿದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕೋಡಿಯ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ದೇವೇಂದ್ರ ಮಂಡೇದ ಹೇಳಿದರು.

ಸಮೀಪದ ದೇವಗಾಂವದ ತವನಪ್ಪ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ದುಶ್ಚಟಗಳಿಂದ ದೂರವಿದ್ದು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ವಿದ್ಯಾರ್ಥಿಯ ಲಣ ಎಂದರು. ಜಗದ್ಗುರು ಶಿವಾನಂದ ಹಾಗೂ ವಿದ್ಯಾವರ್ಧಕ ಸಂದ ಚೇರ್ಮನ್​ ರಾಜೇಂದ್ರ ಅವಲಕ್ಕಿ ಅಧ್ಯತೆ ವಹಿಸಿದ್ದರು ಆದರ್ಶ ವಿದ್ಯಾರ್ಥಿ ಮತ್ತು ಆದರ್ಶ ವಿದ್ಯಾರ್ಥಿನಿ ಪುರಸ್ಕಾರ ನೀಡಲಾಯಿತು. ಸಂಜೆ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು. ನಿರ್ದೇಶಕರಾದ ಆರ್​.ವೈ. ದುಗ್ಗಾಣಿ, ಬಾಬು ದೇವರಮನಿ, ಶೀತಲ ಶಿರಗಾಪುರ, ಮಹಾಂತೇಶ ಗಜಪತಿ, ಬಸವರಾಜ ಮೂರಸಿದ್ದಿ, ವಜ್ರ ಕುಮಾರ ಅವಲಕ್ಕಿ, ಕುಮಾರ ಅರಳಿಮರದ, ಎಸ್​.ಜಿ. ಗಂಗಾವತಿ, ಶಿಕರಾದ ಎಸ್​.ಬಿ. ಹಾರುಗೊಪ್ಪ, ಮುಖ್ಯಶಿಕ್ಷಕ ಎಸ್​.ಎಸ್​. ಅಂಗಡಿ, ಎಲ್​.ಆರ್​. ನಾಯಕ, ಕೆ.ಎಸ್​. ತಳವಾರ, ಆರ್​.ಎ್​. ಜೆನರ ಇತರರಿದ್ದರು.