ಸುಂಟಿಕೊಪ್ಪದ ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿರುವುದು. 
ಜಿಲ್ಲೆ

ಗೌರಿ ಗಣೇಶ ಮೂರ್ತಿ ವಿಸರ್ಜನೆ

ಶಿವಶಂಕರ್ ಎಂ. ಹೆಬ್ಬಳ್ಳ

ಸುಂಟಿಕೊಪ್ಪ : ಸುಂಟಿಕೊಪ್ಪದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 60ನೇ ವರ್ಷದ ಗೌರಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಿತು.

ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮಂಗಳೂರಿನ ನಾಸಿಕ್‌ಬ್ಯಾಂಡ್, ಡಿಜೆ ಮತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿ ನಂತರ ಗದ್ದೆಹಳ್ಳದ ಯಂಕನ ಉಲ್ಲಾಸ್, ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

9 ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಶ್ರೀಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆಗಳು, ಭಜನೆ ಹಾಗೂ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾನುವಾರ ಆರ್ಚಕರಾದ ದರ್ಶನ್ ಬಾರಿತ್ತಾಯ, ಮನೋಜ್ ಭಟ್, ಕೃಷ್ಣಭಟ್ ನೇತೃತ್ವದಲ್ಲಿ ವಿಸರ್ಜನೆ ಮಾಡಲಾಯಿತು. ಯುವಕ ಯುವತಿಯರು, ಮಹಿಳೆಯರು, ಮಕ್ಕಳು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕೆಸರಿ ಧ್ವಜ ಹಾಗೂ ಶಲ್ಯ ಧರಿಸಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಮದರಸಗಳಲ್ಲಿ ಈದ್‌ಮಿಲಾದ್ ಕಾರ್ಯಕ್ರಮ ನಡೆಸಲಾಗುತ್ತಿದ್ದು ಈ ಸಂದರ್ಭದಲ್ಲಿ ಮುಸ್ಲಿಂರು ಮೆರವಣಿಗೆಗೆ ತೆರಳುತ್ತಿದ್ದ ಹಿಂದುಗಳಿಗೆ ತಂಪು ಪಾನಿಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದರು.

ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಚ್.ನಿಖಿಲ್, ಖಜಾಂಚಿ ಬಿ.ಡಿ.ಪದ್ಮನಾಭ, ಕಾರ್ಯದರ್ಶಿಗಳಾದ ಎಂ.ಪಾಂಡ್ಯನ್, ಹೃತಿಕ್, ನವೀನ್, ಸಹಕಾರ್ಯದರ್ಶಿಗಳಾದ ಮಣಿ, ಪಿ.ಕೆ.ಸೂರ್ಯ, ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಎಸ್.ರಾಜೇಶ್, ಬಿ.ಡಿ.ಅಶ್ವತ್ಥ್, ಎಚ್.ಸಿ.ಯೋಗೇಶ್, ಮಧು, ಚೇತನ್, ಶಿವು, ಪುನಿತ್, ಗುಣಶೇಖರ್, ತ್ರಿಜಲ್ ಮಹೇಶ, ಸಮಿತಿ ಸದಸ್ಯರು ಇದ್ದರು.

ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಹೆಚ್ಚುವರಿ ಎಸ್‌ಪಿ ಸುಂದರರಾಜ್, ಕುಶಾಲನಗರ ತಾಲೂಕು ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ವೃತ್ತ ನೀರಿಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.