ಧಾರವಾಡ: ನಗರದ ಟಾಟಾ ಮೋಟಾರ್ಸ್ ಬಾಡಿ ಸೆಲ್ಯೂಷನ್ಸ್ನ ಸಾಮಾಜಿಕ ಜವಾಬ್ದಾರಿ ವಿದ್ಯಾದಾನಂ ನಿಮಿತ್ತ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸರ್ಕಾರಿ ಪ್ರೌಢ ಶಾಲೆಯ 13 ಪ್ರತಿಭಾವಂತ ವಿದ್ಯಾಥಿರ್ನಿಯರಿಗೆ ವಿದ್ಯಾಥಿರ್ವೇತನ ವಿತರಿಸಲಾಯಿತು. ಘಟಕದ ಮುಖ್ಯಸ್ಥ ವಿಜಯಸಿಂಗ್, ಗ್ರಾಪಂ ಅಧ್ಯಕ್ಪ ನಾಗೇಶ ಹಟ್ಟಿಹೊಳಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರವಿ ಕುಲಕರ್ಣಿ, ಮುಖ್ಯೋಪಾಧ್ಯಾಯ ಜಗದೀಶ ಬಳಗಾರ, ಗ್ರಾಪಂ ಸದಸ್ಯರು, ಟಿಎಂಬಿಎಸ್ಎಲ್ ನೌಕರರು, ಗ್ರಾಮಸ್ಥರು ಇತರರು ಇದ್ದರು.