ಶಿರ್ವ: ಬೆಳ್ಳೆ ನವೋದಯ ಒಕ್ಕೂಟದ ತ್ರೈಮಾಸಿಕ ಸಭೆ ಇತ್ತೀಚೆಗೆ ಮೂಡುಬೆಳ್ಳೆ ಗೀತಾಮಂದಿರದಲ್ಲಿ ನಡೆಯಿತು. ಬೆಳ್ಳೆ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ ನವೋದಯ ಸ್ವಸಹಾಯ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಿದರು.
ಒಕ್ಕೂಟ ಅಧ್ಯಕ್ಷ ಹರಿಶ್ಚಂದ್ರ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟ ಪದಾಧಿಕಾರಿಗಳಾದ ಅಂಬಿಕಾ ಸುವರ್ಣ ಶಶಿಧರ್ ಆಚಾರ್, ವಿನಯ, ತನುಜಾ, ಉಮಾ ಮರ್ಣೆ, ಸುಮತಿ, ರಾಜೇಶ್ವರಿ ನವೋದಯ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಜಾತ ಎಸ್.ಸುವರ್ಣ ಒಕ್ಕೂಟದ ವರದಿ ವಾಚಿಸಿದರು. ನವೋದಯ ಪ್ರೇರಕಿ ಗೀತಾ ಶೆಟ್ಟಿ ವಂದಿಸಿದರು.