ಹುಳಿಯಾರು : ನಮ್ಮ ಬ್ಯಾಂಕು ಸ್ವಸಹಾಯ ಸಂಘಗಳು, ಕೈಗಾರಿಕೆ, ಸೋಲಾರ್ ವಿದ್ಯುತ್ ಉತ್ಪಾದನೆಗೆ, ಉನ್ನತ ವ್ಯಾಸಂಗಕ್ಕೆ, ಕೃಷಿ, ಕೃಷಿಗೆ ಪೂರಕವಾದ ಹೈನುಗಾರಿಕೆ, ಕುರಿ, ಕೋಳಿ, ಮೊಲ ಸಾಕಾಣಿಕೆ ಮುಂತಾದ ಉದ್ಯೋಗಾಧಾರಿತ ಸಾಲ ಸೌಲಭ್ಯಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಎಸ್ಬಿಐ ಮ್ಯಾನೇಜರ್ ಸುರೇಶ್ ತಿಳಿಸಿದರು.
ತಾಲೂಕಿನ ದೊಡ್ಡಬಿದರೆ ಗ್ರಾಪಂ ಕಲ್ಲಹಳ್ಳಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡಿದರು.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ.ಕುಮಾರಸ್ವಾಮಿ ಮಾತನಾಡಿ, ದೇಶದ ಮೂಲೆ ಮೂಲೆಗಳ ಹಳ್ಳಿಗಳಿಗೂ ಪ್ರಧಾನಮಂತ್ರಿಯವರ ಜನ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳು ತಲುಪಬೇಕೆಂಬುದೇ ಜನ ಸುರಕ್ಷಾ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ದೊಡ್ಡಬಿದರೆ ಗ್ರಾಪಂ ಸಂಜೀವಿನಿ ಒಕ್ಕೂಟದ ಎಂಬಿಕೆ ಲಕ್ಷಿ$್ಮ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಬ್ಯಾಂಕುಗಳ ಮುಖಾಂತರ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.